ಬಂಟ್ವಾಳ ಡಿ 19: ಪುದು ಗ್ರಾಮದ ಮಾರಿಪಳ್ಳದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಡಿ 19 ರ ಸೋಮವಾರ ಸಂಜೆ ದಾಳಿ ನಡೆಸಿದ ಘಟನೆ ನಡೆದಿದ್ದು, ಈ ಸಂಬಂಧ ಒರ್ವನನ್ನು ಬಂಧಿಸಲಾಗಿದೆ. ಮಾರಿಪಳ್ಳ ನಿವಾಸಿ ಬಶೀರ್(45) ಬಂಧಿತ ಆರೋಪಿಯಾಗಿದ್ದಾನೆ.ದಾಳಿಯ ವೇಳೆ ಸ್ಥಳದಲ್ಲಿದ್ದ ಸುಮಾರು 72 ಕೆ.ಜಿ.ಯಷ್ಟು ದನದ ಮಾಂಸ ಹಾಗೂ ಇನ್ನಿತರ ಸಲಕರಣೆಗಳನ್ನು ವಶಪಡಿಸಿದ್ದಾರೆ. ಆರೋಪಿ ಕಳೆದ ಹಲವು ಸಮಯಗಳಿಂದ ತನ್ನ ಮನೆ ಸಮೀಪವೇ ಅಕ್ರಮವಾಗಿ ಕಸಾಯಿಖಾನೆಯನ್ನು ನಡೆಸುತ್ತಿದ್ದಾನೆನ್ನಲಾಗಿದೆ.ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ.ಪ್ರಸನ್ನ ಮತ್ತವರ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.ಈ ಬಗ್ಗೆ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.