ಮಂಗಳೂರು, ಆ.06 (Daijiworld News/RD): ಬಕ್ರೀದ್ ನಿಮಿತ್ತ ಗೋ ಹತ್ಯೆಯನ್ನು ತಡೆಯಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕ ಸಂಘಟನೆಗಳು ದಕ್ಷಿಣ ಕನ್ನಡ ಅಪರ ಆಯುಕ್ತರಾದ ಎಂ. ಜೆ. ರೂಪ ಇವರಿಗೆ ಮನವಿ ಸಲ್ಲಿಸಿದರು.
ಬಕ್ರೀದ್ ಸಂದರ್ಭದಲ್ಲಿ ಅಕ್ರಮ ಆಕ್ರಮವಾಗಿ ಗೋ ಹತ್ಯೆ ಮಾಡುವುದು ಮತ್ತು ಅಕ್ರಮ ಗೋ ಸಾಗಾಣಿಕೆ ಮಾಡುವುದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆ ದಿನ ಪ್ರಾಣಿ ವಧೆಯನ್ನು ಮಾಡಲು ಅನುಮತಿಯನ್ನು ನೀಡಲಾಗುತ್ತದೆ, ಆದರೆ ಆ ಅನುಮತಿ ಕಾನೂನು ಬಾಹಿರ ಆಗಿದೆ. ಹಾಗಾಗಿ ಬಕ್ರೀದ್ ದಿನ ಯಾವುದೇ ಕಾರಣಕ್ಕೂ ಗೋ ಹತ್ಯೆ ಮಾಡಬಾರದು ಮತ್ತು ಅನುಮತಿಯನ್ನು ನೀಡಬಾರದು.
ಹಿಂದುಗಳು ಹೇಗೆ ’ಇಕೋ ಫ್ರೆಂಡ್ಲಿ ಗಣೇಶೋತ್ಸವ’, ’ಇಕೋ ಫ್ರೆಂಡ್ಲಿ ಹೋಳಿ’, ’ಇಕೋ ಫ್ರೆಂಡ್ಲಿ ದೀಪಾವಳಿ’ ಇತ್ಯಾದಿಗಳ ಬಗ್ಗೆ ಸರ್ಕಾರದಿಂದ ಹಿಂದುಗಳಿಗೆ ಯಾವ ರೀತಿ ಕಾನೂನು ಇದೆಯೋ ಅದೇ ರೀತಿ ಮುಸ್ಲೀಂಮರಿಗೂ ಕೂಡ ’ಇಕೋ ಫ್ರೆಂಡ್ಲಿ ಬಕ್ರೀದ್’ ನಡೆಸುವುದಕ್ಕೆ ಸರ್ಕಾರ ಕಾನೂನನ್ನು ರೂಪಿಸಬೇಕು. ಹಾಗೂ ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧವಾಗುವಂತಹ ಕಾನೂನನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ಚಂದ್ರ ಮೊಗೇರ್, ಶ್ರೀ ಯೋಗೀಶ್ ಅಶ್ವಥಪುರ, ಉಮಾ, ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಜಿಲ್ಲಾ ಅದ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ಹರೀಶ್ ಬೊಕ್ಕಪಟ್ನ, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್,ಪುರಂದರ, ರವಿ ಮೂಡುಶೆಡ್ಡೆ ಮುಂತಾದವರು ಉಪಸ್ಥಿತರಿದ್ದರು.