ಡಿ 19: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಗೆಯಲ್ಲಿದ್ದಾರೆ' ಎನ್ನುವ ಸುದ್ದಿ ಡಿ 18ರ ಸೋಮವಾರ ಸಂಜೆಯಿಂದ ವಾಟ್ಸಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಆಗಿ ಹರಿದಾಡಿದೆ. ಈ ಸುದ್ದಿಯಿಂದ ಚಿಂತಿತರಾದ ಹಿತೈಷಿಗಳಿಗೆ ಬಿ.ಎಸ್.ಯಡಿಯೂರಪ್ಪ ನಾನು ಚೆನ್ನಾಗೇ ಇದ್ದೀನಿ ಎಂದು ಉತ್ತರ ಕೊಟ್ಟು ಸಾಕಾಗಿದೆಯಂತೆ. ಇನ್ನು ಈ ಬಗ್ಗೆ ಮಂಗಳವಾರ ಯಡಿಯೂರಪ್ಪ ಅವರ ಬಳಿ ಮಾಧ್ಯಮದವರು ಪ್ರಶ್ನಿಸಿದಾಗ ಪ್ರತ್ಯಕ್ಷ ನೋಡ್ತಾ ಇದ್ದೀರಲ್ಲಾ' ಎಂದು ಉತ್ತರಿಸಿದರು. 'ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಗಮನಿಸುತ್ತಾ ಕುಳಿತ್ತಿದ್ದ ಸಂದರ್ಭದಲ್ಲಿ ಬಿಎಸ್ವೈಗೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ' ಎಂದು ಫೋಟೋ ಸಮೇತ ಸುಳ್ಳು ಸುದ್ದಿ ವೈರಲ್ ಆಗಿತ್ತು.