ಮಂಗಳೂರು, ಆ.06(Daijiworld News/SS): ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಪಿವಿಎಸ್ ಜೈಲ್ ರೋಡ್ ಬಳಿ ಕಂಪೌಂಡ್ ಕುಸಿದು ಬಿದ್ದಿದೆ.
ನಿರಂತರವಾಗಿ ಮಳೆ ಸುರಿಯುತ್ತಿದ್ದು ಭಾರೀ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ. ವಾಣಿಜ್ಯ ಸಂಕೀರ್ಣದ ಕಂಪೌಂಡ್ ಕುಸಿದ ಜಾಗದಲ್ಲೇ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕುಸಿದ ಕಂಪೌಂಡ್ ಮಣ್ಣು ಒಳಚರಂಡಿಗೆ ಬಿದ್ದಿದ್ದು, ಮನಪಾ ವತಿಯಿಂದ ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮಳೆ ಬಿರುಸಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.