ಪುತ್ತೂರು,ಸೆ.13: ಬೆಂಗಳೂರಿನಲ್ಲಿ ನಡೆದ ನಾನು ಗೌರಿ ಎಂಬ ಪ್ರತಿರೋಧ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗೆ ಕಾರಣ ಎಂದು ಆರೋಪಿಸಿದ ಹಾಗೂ ಮೋದಿ ತಾಯಿಯ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಾರೆ ಎಂದು ವಿಚಾರವಾದಿ ಜಿಗ್ನೇಶ್ ಮೆವಾನಿ ವಿರುಧ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಪುತ್ತೂರು ನಗರ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಮೋದಿ ನೀಚ ಮನಸ್ಸಿನ ನಾಯಕ, ಇಂತಹ ನಾಲಾಯಕ್ ಮಗನಿಗೆ ಏಕೆ ಜನ್ಮ ನೀಡಿದ್ದೀರಿ ಎಂಬುದಾಗಿ ಪ್ರಧಾನಿಯ ತಾಯಿ ಬಳಿ ಪ್ರಶ್ನಿಸೋಣ ಎಂಬ ಹೇಳಿಕೆಯನ್ನು ವಿಚಾರವಾದಿ ಜಿಗ್ನೇಶ್ ಮೆವಾನಿ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಲ್ಲದೆ, ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ.