ಮಂಗಳೂರು, ಡಿ 19: ಹೆಜ್ಜೆ ಹೆಜ್ಜೆಗೂ ಕೈಗೊಬ್ಬರು ಕಾಲಿಗೊಬ್ಬರು ಸಹಾಯಕರನ್ನು ಹೊಂದಿರುವ ರಾಜಕಾರಣಿಗಳೇ ಹೆಚ್ಚು. ಆದರೆ ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಭಿನ್ನ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ.
ತಮ್ಮ ಕೈಗೆ ಅಧಿಕಾರ ಸಿಕ್ಕರೆ ಸಾಕು ತಾನೇ ಎಲ್ಲಾ ಅನ್ನೋ ಹಾಗೇ ಮೆರೆಯೋ ರಾಜಕಾರಣಿಗಳ ನಡುವೆ ಪ್ರಧಾನಿ ಮೋದಿ ಮಂಗಳೂರು ಭೇಟಿ ನೀಡಿದ ವೇಳೆಯಲ್ಲಿ ಮತ್ತೊಮ್ಮೆ ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದು ಬೇರೆಯವರಿಗೆ ಹೇಳುವುದನ್ನೇ ತಾವೂ ಪಾಲನೆ ಮಾಡುವುದು ಎಂಬುದನ್ನು ತಮ್ಮ ನಡೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಡಿ.18ರಂದು ರಾತ್ರಿ 11 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷ ದ್ವೀಪ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಮಂಗಳೂರಿನಲ್ಲಿ ಪ್ರಧಾನಿ ಮೋದಿ ಸಕ್ರ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದು, ಸರಳತೆ ಮೆರೆದಿದ್ದಾರೆ.
ಇತ್ತೀಚೆಗೆ ಅಪ್ಪಳಿಸಿದ ಓಕಿ ಚಂಡಮಾರುತದಿಂದ ಹಾನಿಗೆ ಒಳಗಾದ ಕೇರಳ,ತಮಿಳುನಾಡು ಹಾಗೂ ಲಕ್ಷ ದ್ವೀಪ ಪ್ರದೇಶವನ್ನು ಪ್ರಧಾನಿ ಅವಲೋಕಿಸಲಿಸಲಿದ್ದು, ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಲಕ್ಷ ದ್ವೀಪದ ಅಗತಿ ದ್ವೀಪಕ್ಕೆ ತೆರಳಿದ್ದಾರೆ.