ಕುಂದಾಪುರ, ಆ 05 (DaijiworldNews/SM): ದೇವಸ್ಥಾನದ ಕೆರೆಯೊಂದರಲ್ಲಿ ಈಜಲು ಹೋದ ಇಬ್ಬರು ಯುವಕರಲ್ಲಿ ಓರ್ವ ಸಾವಿಗೀಡಾದ ಘಟನೆ ಕೋಟ ಸಮೀಪದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪುಷ್ಕರಣಿಯಲ್ಲಿ ನಾಗರಪಂಚಮಿಯ ದಿನವಾದ ಸೋಮವಾರ ನಡೆದಿದೆ. ಕೆರೆಯಲ್ಲಿ ಸಾವಿಗೀಡಾದ ಯುವಕನನ್ನು ಕಾರ್ಕಡ ನಿವಾಸಿ ವಿನೋದ್ ಗಾಣಿಗ(28) ಎಂದು ಗುರುತಿಸಲಾಗಿದೆ.
ಕೋಟದ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ನಾಗರಪಂಚಮಿಯಂದು ವಿಶೇಷ ಪೂಜಾ ಕೈಂಕರ್ಯ ಒಂದೆಡೆಯಾದರೆ ಅದೇ ಕೆರೆ ಪುಷ್ಕರಣಿ ಯಲ್ಲಿ ವಿನೋದ್ ಗಾಣೀಗ ತನ್ನ ಸ್ನೇಹಿತನೊಂದಿಗೆ ಈಜಲು ಹೋಗಿದ್ದರು.
ಇಬ್ಬರಿಗೂ ಈಜು ಗೊತ್ತಿತ್ತು ಎನ್ನಲಾಗಿದ್ದು, ಮಳೆಯ ಕಾರಣ ಕೆರೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿತ್ತು ಎಂದು ತಿಳಿದು ಬಂದಿದೆ. ಇದರಿಂದಾಗಿ ವಿನೋದ್ ಗೆ ನೆಲ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ವಿನೋದ್ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತ ದಡ ಸೇರಿದ್ದು ಸ್ಥಳೀಯರನ್ನು ಕೂಗಿದ್ದಾನೆ. ಆದರೆ ಅದಾಗಲೇ ವಿನೋದ್ ಮುಳುಗಿ ಹೋಗಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ಜು ತೆಗೆದಿದ್ದಾರೆ. ಮೃತ ವಿನೋದ್ ದೇಹದಾರ್ಡ್ಯ ಪಟುವಾಗಿದ್ದಾನೆ.
ಇನ್ನು ಈ ಬಗ್ಗೆ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ