ಬಂಟ್ವಾಳ, ಆ 04 (DaijiworldNews/SM): ಶಂಕಿತ ಡೆಂಗ್ ಜ್ವರಕ್ಕೆ ಬಂಟ್ವಾಳದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ಸಮೀಪದ ಪೊನ್ನೋಡಿ ನಿವಾಸಿ, ದಿ. ಬಾಲನ್ ಎಂಬವರ ಪುತ್ರ ಪ್ರಶಾಂತ್ ಯಾನೆ ಪಚ್ಚು ಪೊನ್ನೋಡಿ(39) ಮೃತಪಟ್ಟವರು.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಪ್ರಶಾಂತ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಶಂಕಿತ ಡೆಂಗ್ಯೂ ಬಾಧಿಸಿರುವ ಬಗ್ಗೆ ತಿಳಿದುಬಂದಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ದಿ.ಬಾಲನ್ ಮತ್ತು ದಿ.ಸರೋಜಿನಿ ದಂಪತಿಗಳ ನಾಲ್ವರು ಪುತ್ರರ ಪೈಕಿ ಪ್ರಶಾಂತ್ ಮೂರನೇಯವರಾಗಿದ್ದಾರೆ. ಅವಿವಾಹಿತರಾಗಿರುವ ಇವರು ಲಾರಿ ಡ್ರೈವರ್ ಆಗಿ ದುಡಿಯುದ್ದಿದ್ದರು.