ಮಂಗಳೂರು, ಆ 04 (DaijiworldNews/SM): ತೊಕ್ಕೊಟ್ಟುವಿನ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ವಾರದ ಹಿಂದೆ ಕಾಫಿ ಕಿಂಗ್ ಸಿದ್ಧಾರ್ಥ್ ಆತ್ಮಹತ್ಯೆ ನಡೆಸಿದ ಬೆನ್ನಲ್ಲೇ ಇದೀಗ ಚಿಕ್ಕಮಂಗಳೂರು ಮೂಲದ ಯುವಕನೊಬ್ಬ ರವಿವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಕ್ಷಿಸಲಾಗಿದೆ.
ಚಿಕ್ಕಮಗಳೂರಿನ ಕಡೂರು ನಿವಾಸಿ ಗಿರೀಶ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಕೆಟಿಎಂ ಬೈಕ್ ನಲ್ಲಿ ಬಂದು ನದಿಗೆ ಹಾರಿದ್ದ. ಇದನ್ನು ಕಂಡು ಅಲ್ಲೇ ಸಮೀಪದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು ಸ್ಥಳಕ್ಕೆ ತೆರಳಿ ಗಿರೀಶ್ ರನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಕಂಕನಾಡಿ ನಗರ ಮತ್ತು ಉಳ್ಳಾಲ್ ಪೊಲೀಸರು ಭೇಟಿನೀಡಿ ವಿಚಾರಣೆ ನಡೆಸಿದ್ದಾರೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.