ಕಾಸರಗೋಡು, ಆ 4 (Daijiworld News/RD): ಕೆಲವು ದಿನಗಳ ಬಳಿಕ ಮಳೆ ಮತ್ತೆ ಬಿರುಸುಗೊಳ್ಳುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದ್ದು ಇದೀಗ ಕಡಲ್ಕೊರೆತ ಉಂಟಾಗಿದೆ.
ಉಪ್ಪಳ ಮುಸೋಡಿ, ಮಣಿಮುಂಡ ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದ್ದು, ಕಳೆದ ಎರಡು ಮೂರು ದಿನಗಳಿಂದ ಮತ್ತೆ ಕಡಲ್ಕೊರೆತದ ಅಬ್ಬರದಿಂದ ತೀರವಾಸಿಗಳು ಆತಂಕಗೊಂಡಿದ್ದಾರೆ.
ಈಗಾಗಲೇ ಮಣಿಮುಂಡದಲ್ಲಿ ಎರಡು ಮನೆಗಳು ಕುಸಿದಿದೆ. ನಾಲ್ಕು ಮನೆಗಳು ಅಪಾಯದಲ್ಲಿದೆ. ನದಿ ತೀರದ ಹಲವು ಮಂದಿ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದಾರೆ.
ಶಾರದಾ ನಗರ, ಹನುಮಾನ್ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿರುವ ಪರಿಣಾಮ, ಹಲವಾರು ಮನೆಗಳು ಅಪಾಯ ಸ್ಥಿತಿಯನ್ನು ಎದುರಿಸುತ್ತಿದೆ. ಧಾರಾಕಾರ ಸುರಿಯುವ ಭಾರೀ ಮಳೆಗೆ ತೀರವಾಸಿಗಳಲ್ಲಿ ಆತಂಕ ಮನೆ ಮಾಡಿದೆ.