ಮಂಗಳೂರು, ಆ 3 (Daijiworld News/RD): ಮಂಗಳೂರಿನಿಂದ ಪೂನಾಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಹಿಸುದ್ದಿಯನ್ನು ನೀಡಿದೆ.
ಮಂಗಳೂರು-ಪೂನಾ ಮಧ್ಯೆ ಸಂಚರಿಸಲಿರುವ ಈ ’ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸಿಲ್ ಸ್ಲೀಪರ್’ ಬಸ್ಗೆ ಆ 3 ಶನಿವಾರದಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಬಿಜೈ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಸುಮಾರು ಒಂದು ಕೋಟಿ ರೂ. ವೆಚ್ಚದ ‘ಅಂಬಾರಿ ಡ್ರೀಮ್ ಕ್ಲಾಸ್’ ಮಲ್ಟಿ ಆಕ್ಸಿಲ್ ಸ್ಲೀಪರ್ ಬಸ್ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು-ಪೂನಾ ಮಧ್ಯೆ ಶೀಘ್ರವೇ ಸಂಚರಿಸಲಿದೆ. ‘ಆರಾಮವಾಗಿ ಮಗುವಿನಂತೆ ನಿದ್ರಿಸಿ’ ಎಂಬ ಸ್ಲೋಗನ್ನ ಮೂಲಕ ಜನಪ್ರೀಯವಾದ ಮಲ್ಟಿಆಕ್ಸಿಲ್ ಕ್ಲಬ್ ಕ್ಲಾಸ್ ಸೀಟರ್ ಬಸ್ ಹಾಗೂ ಶೌಚಾಲಯ ಹೊಂದಿರುವ ಫ್ಲೈ ಬಸ್ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಇನ್ನು ಮುಂದೆ ಅಂಬಾರಿ ಡ್ರೀಮ್ ಕ್ಲಾಸ್ನಲ್ಲಿ ‘ಕನಸಿನೊಂದಿಗೆ ಪ್ರಯಾಣಿಸುವ’ ಮೂಲಕ ಜರ್ನಿಯನ್ನು ಇನ್ನೂ ಹಿತಕರವಾಗಿಸಲಿದೆ.
ಮಂಗಳೂರಿನಿಂದ ದೂರದ ಊರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಇನ್ನೂ ಆರು ಅಂಬಾರಿ ಡ್ರೀಮ್ ಕ್ಲಾಸ್ ಬಸ್ಗಳು ಕರಾವಳಿಗೆ ಆಗಮಿಸಲಿದ್ದು, ಮೊದಲ ಹಂತದಲ್ಲಿ ಎರಡು ಬಸ್ಗಳು ಈಗಾಗಲೇ ಬಂದಿವೆ. ಇನ್ನು ಎರಡು ಹಂತದಲ್ಲಿ ಮೂರು ಬಸ್ಗಳು ಆಗಮಿಸಲಿದೆ. ಈ ಬಸ್ಗಳನ್ನು ಹೈದರಾಬಾದ್, ತಿರುಪತಿ, ಚೆನ್ನೈ, ಮುಂಬೈ, ಎರ್ನಾಕುಲಂಗಳಲ್ಲಿ ಸಂಚರಿಸಲಿದೆ. ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸಿಲ್ ಸ್ಲೀಪರ್ ಸ್ಪೇಷಲ್
ಅಂಬಾರಿ ಡ್ರೀಮ್ ಕ್ಲಾಸ್ ಬಸ್ 14.50 ಮೀಟರ್ನಷ್ಟು ವಿಶಾಲವಾಗಿದ್ದು, 32 ಸಿಟ್ಟಿಂಗ್ ಸೌಲಭ್ಯ ಇದೆ, ಜೊತೆಗೆ ಡ್ರೀಮ್ ಕ್ಲಾಸ್ 40 ಸೀಟು ಹೊಂದಿದೆ. ಸುಮಾರು 1.10 ಕೋಟಿ ರೂ. ವೆಚ್ಚದ ಅಂಬಾರಿ ಡ್ರೀಮ್ ಕ್ಲಾಸ್ ಎರಡು ಬಸ್ಗಳು ಕೆಎಸ್ಆರ್ಟಿಸಿ ಮಂಗಳೂರು ವಿಭಾಗಕ್ಕೆ ಬಂದಿವೆ. ಈ ಬಸ್ಗಳು ಶನಿವಾರದಿಂದ ಮಂಗಳೂರು-ಪೂನಾ ಮಧ್ಯೆ ಸಂಚರಿಸಲಿವೆ.
ಕೆಎಸ್ಆರ್ಟಿಸಿಯ ಇತರೆ ಸ್ಲೀಪರ್ ಬಸ್ಗಳಿಗಿಂತ ಈ ಬಸ್ ಕೊಂಚ ವಿಭಿನ್ನವಾಗಿದ್ದು, ಆರಾಮದಾಯಕ ಪ್ರಯಾಣ ಬೆಳೆಸಬಹುದು. ಜೊತೆಗೆ ಪ್ರಯಾಣಿಕರಿಗೆ ಮೊಬೈಲ್ ಚಾರ್ಜ ಇರಿಸಲು ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್ ಕೂಡ ಇದೆ. ಪ್ರಯಾಣದ ಸುಖ ಅನುಭವಿಸಲು ಕಿಟಕಿಗಳು, ಹಾಗೂ ತುರ್ತು ನಿರ್ಗಮನ ಬಾಗಿಲುಗಳು, ಬೆಂಕಿ ಅನಾಹುತಗಳನ್ನು ಕೂಡಲೇ ತಪ್ಪಿಸಲು ಮುಂಜಾಗೃತ ಕ್ರಮವಾಗಿ ಫಯರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಂಗಳನ್ನು ಬಸ್ನಲ್ಲಿ ಅಳವಡಿಸಲಾಗಿದೆ.