ಬೆಳ್ತಂಗಡಿ, ಆ 01 (Daijiworld News/SM): ಇಲ್ಲಿನ ತಾಲೂಕು ಕ್ರೀಡಾಂಗಣ ಸಮೀಪದ ನಿವಾಸಿ ಮಹಿಳೆಯೋರ್ವರು ಮನೆಯಲ್ಲಿ ಅಸಹಜವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣ ಸಮೀಪದ ಶೇಡಿ ಎಂಬಲ್ಲಿಯ ನಿವಾಸಿ ಗುಲಾಬಿ(50) ಮೃತಪಟ್ಟ ಮಹಿಳೆ. ವಿವಾಹಿತೆಯಾದ ಇವರಿಗೆ ಮಕ್ಕಳಿರಲಿಲ್ಲ. ಇದೇ ಚಿಂತೆಯಿಂದ ಮನ ನೊಂದಿದ್ದರು. ಅಲ್ಲದೆ ವಿಪರೀತ ಮದ್ಯಸೇವನೆ ಚಟವನ್ನು ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬುಧವಾರ ರಾತ್ರಿ ಮೃತರ ಪತಿ ಬೆಂಗಳೂರು ತೆರಳಿದ್ದು ಮನೆಯಲ್ಲಿ ಈಕೆ ಒಬ್ಬರೇ ಇದ್ದ ಸಮಯದಲ್ಲಿ ವಿಪರೀತ ಮದ್ಯ ಸೇವನೆ ಮಾಡಿರಬಹುದೆಂದು ಶಂಕಿಸಲಾಗಿದೆ. ಅಥವಾ ವಿಷಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮೃತರ ಸಹೋದರಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.