ಕಾರ್ಕಳ: 'ಭಯಾನಕ' ಸುಂಟರಗಾಳಿಯ ಆರ್ಭಟಕ್ಕೆ ಬೆಚ್ಚಿ ಬಿದ್ದ ಜನ - ಹಾರಿ ಹೋದ ಹಂಚು, ಬುಡ ಸಮೇತ ಬಿದ್ದ ಮರ
Thu, Aug 01 2019 12:29:43 PM
ಕಾರ್ಕಳ, ಆ 1 (Daijiworld News/MSP):ಕಾರ್ಮೋಡದ ನಡುವೆ ನುಸುಳಿ ಬಂದ ಸುಂಟರುಗಾಳಿಗೆ ಕಾರ್ಕಳದ ನಕ್ರೆ ಭಾಗದ ಜನರು ಭಯಬೀತರಾಗಿ ಬೆಚ್ಚಿ ಬಿದ್ದಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಗುರುವಾರ ಬೆಳಿಗ್ಗೆ ಸುಮಾರು 9.15 ರ ವೇಳೆಗೆ ಇದಕ್ಕಿಂತಂತೆ ನಕ್ರೆ ಭಾಗದಲ್ಲಿ ಕಾರ್ಮೋಡ ಅವರಿಸಿದ್ದು, ಕ್ಷಣ ಮಾತ್ರದಲ್ಲಿಯೇ ಬೀಸಿದ ಸುಂಟರಗಾಳಿಗೆ ಅಪಾರ ಪ್ರಮಾಣದಲ್ಲಿ ಸೊತ್ತು ಹಾನಿಗೊಳಗಾಗಿದೆ.
ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಳದ ಬಲ ಬದಿಯಲ್ಲಿರುವ ಮೋನಪ್ಪ ಎಂಬವರ ಮನೆ ಮೊದಲಿಗೆ ಹಾನಿಗೊಳಿಗಾಗಿದೆ. ಅಲ್ಲಿಂದ ಕುಂಬ್ರಪದವು ವರೆಗಿನ ಸುಮಾರು 10ಕ್ಕು ಮಿಕ್ಕಿ ಮನೆಗಳು ಭಾಗಶಃ ಹಾನಿಗೊಳಗಾಗಿದೆ.
ತೋಟದಲ್ಲಿದ್ದ ಫಲವತ್ತಾದ ಅಡಿಕೆ,ಬಾಳೆ ಗಿಡಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಆಲದ ಮರ, ಮಾವಿನ ಮರ ಬುಡಸಮೇತ ಕಿತ್ತು ಬಿದ್ದಿದೆ. ಮನೆಯ ಹೆಂಚುಗಳು, ಸಿಮೆಂಟ್ ಸೀಟ್ಗಳು ದೂರ ಕೆಸೆಯಲ್ಪಟ್ಟಿದೆ. 5 ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ತುಂಡರಿಸಿ ಬಿದ್ದಿದೆ. ಪ್ರಾಥಮಿಕ ವರದಿಯ ಪ್ರಕಾರ 10 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಗ್ರಾಮಕರಣಿಕ ಶಿವಪ್ರಸಾದ್ ತಿಳಿಸಿದ್ದಾರೆ.