ಮಂಗಳೂರು, ಆ1(Daijiworld News/RD): ಮೂಡಬಿದಿರೆಯಿಂದ ಗಂಜಿಮಠವಾಗಿ ಅಡ್ಡೂರು ಕಡೆ ಟಿಪ್ಪರ್ನಲ್ಲಿ ಸಾಗಿಸುತ್ತಿದ್ದ18 ದನಗಳ ಸಹಿತ ಇಬ್ಬರೂ ಆರೋಪಿಗಳನ್ನು ಗಂಜಿಮಠದ ರಾಜ್ ಅಕಾಡೆಮಿ ಶಾಲೆ ಬಳಿ ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾನುವಾರುಗಳು ಸಾಗಾಟದ ಬಗ್ಗೆ ಸುಳಿವು ಪಡೆದಕೊಂಡ ಪೊಲೀಸರು, ಗಂಜಿಮಠದಲ್ಲಿ ರಾತ್ರಿ ಸುಮಾರು 8.50 ಗಂಟೆಗೆ ಕಾರ್ಯಾಚರಣೆ ನಡೆಸುತ್ತಿದ್ದರು, ಟಿಪ್ಪರ್ ಲಾರಿಯನ್ನು ಅದರ ಚಾಲಕನು ವೇಗವಾಗಿ ಚಲಾಯಿಸುತ್ತಿದ್ದಾಗ ಪೊಲೀಸರು ನಿಲ್ಲಿಸಲು ಸೂಚಿಸಿದರು, ಇದನ್ನು ಗಮನಿಸಿದ ಆರೋಪಿಗಳು ವಾಹನವನ್ನು ವೇಗವಾಗಿ ಓಡಿಸಿ ರಾಜ್ ಅಕಾಡೆಮಿ ಬಳಿ ನಿಲ್ಲಿಸಲು ಮುಂದಾಗಿ ಓಡಲು ಯತ್ನಿಸಿದ್ದಾರೆ. ಅದರಲ್ಲಿ ಇಬ್ಬರು ಆರೋಪಿಯನ್ನು ತಕ್ಷಣ ಬಂಧಿಸಿದ್ದಾರೆ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಅಡ್ಡೂರು ಕುಚಿಗುಡ್ಡೆ ಮನೆ ನಿವಾಸಿ ಅಬ್ದುಲ್ ರಹಿಮಾನ್ 42 ಮತ್ತು ಅಡ್ಡೂರು ಬದ್ರಿಯಾ ಮಸೀದಿ ಬಳಿ ನಿವಾಸಿ ಉಸ್ಮಾನ್ 46 ಬಂಧಿತ ಆರೋಪಿಗಳಾಗಿದ್ದು, 18 ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿದ್ದು ಕಂಡುಬಂದಿದ್ದು, ಟಿಪ್ಪರ್ ಸಮೇತವಾಗಿ ಒಟ್ಟು 5 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ಈ ಸಂದರ್ಭದಲ್ಲಿ ವಶಪಡಿಸಿಕೊಂಡರು. ಪರಾರಿಯಾದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಈಗಾಗಲೇ ಮುಂದುವರಿದಿದೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶದಂತೆ ಪೊಲೀಸ್ ಅಧಿಕಾರಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಶ್ರೀನಿವಾಸ ಗೌಡ, ಬಜ್ಪೆ ಠಾಣಾ ನಿರೀಕ್ಷಕ ಶಿವಪ್ರಕಾಶ್ ನಾಯ್ಕ್, ಪಿಎಸ್ಐ ಸತೀಶ್ ಎಂ.ಪಿ.ಕಮಲಾ, ಎಎಸ್ಐ ರಾಮ ಪೂಜಾರಿ ಮತ್ತು ರಾಮ ಪೂಜಾರಿ ಮತ್ತು ರಾಮಚಂದ್ರ ಮಾರ್ಗದರ್ಶನದಂತೆ ಹೆಡ್ಕಾನ್ಸ್ಟೇಬಲ್ಗಳಾದ ರಾಜೇಶ್ ನಾಯ್ಕ್, ಪುರುಷೋತ್ತಮ, ಸಂತೋಷ್, ಹೊನ್ನಪ್ಪ ಗೌಡ, ಸತ್ಯ ನಾರಾಯಣ, ರೋಹಿತ್, ಗಿರೀಶ್, ಜಗದೀಶ್, ಕಾನ್ಸ್ಟೇಬಲ್ಗಳಾದ ಕುಮಾರಸ್ವಾಮಿ, ಮಂಜುನಾಥ್, ನಾಯ್ಕ, ಈರಪ್ಪ, ಅಭಿಷೇಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.