ಕಾಸರಗೋಡು, ಜು 31(Daijiworld News/MSP): ಇಲ್ಲಿನ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನ್ಯ ಎಂಬಲ್ಲಿ ಈಜಲೆಂದು ಕೆರೆಗೆ ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.31 ರ ಬುಧವಾರ ಮಧ್ಯಾಹ ನಡೆದಿದೆ.
ಮೃತರನ್ನು ಆಲಂಪಾಡಿ ಬಾಫಿಕಿ ನಗರದ ಶಾಫಿಯವರ ಪುತ್ರ ಖಾದರ್ (17), ಬೆಳ್ಳೂರಡ್ಕದ ಮುಹಮ್ಮದ್ ರವರ ಪುತ್ರ ಸಾಲಿ (17) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರ ಜೊತೆ ಇಂದು ಮಧ್ಯಾಹ್ನ ಈಜಲೆಂದು ಕೆರೆಗೆ ಇಳಿದಿದ್ದ ಸಂದರ್ಭ ಈ ಘಟನೆ ನಡೆದಿದೆ.
ಇಂದು ಶಾಲೆಗೆ ರಜೆಯಾದುದರಿಂದ ಪರಿಸರದ ಹಲವೆಡೆಗಳಿಂದ ತಲಪಿದ ಮೂವತ್ತಕ್ಕೂ ಅಧಿಕ ಮಕ್ಕಳು ಈ ಕೆರೆಗೆ ಸ್ನಾನಕ್ಕೆ ತಲಪಿದ್ದರು . ಈ ನಡುವೆ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದು , ಜೊತೆಗಿದ್ದವರು ರಕ್ಷಿಸಲೆತ್ನಿಸಿದರೂ ಯಶಸ್ವಿಯಾಗಲಿಲ್ಲ . ಬಳಿಕ ಸ್ಥಳೀಯರು , ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹಗಳನ್ನು ಮೇಲಕ್ಕೆತ್ತಿದ್ದರು.