ಉಡುಪಿ,ಜೂ 30 (Daijiworld News/RD): ದೈವ ಚಾಕರರಾಗಿ ಸೇವೆ ಸಲ್ಲಿಸುತ್ತಿದ್ದ, ಪಾಂಡುರಂಗ ಪಡ್ಡಮ್ ಅವರು ಬೆಂಗಳೂರು ಭಾರತೀಯ ವಿದ್ಯಾ ಭವನದಲ್ಲಿ ಅಮೇರಿಕಾದ ಇಂಟರ್ ನ್ಯಾಷನಲ್ ವರ್ಚುವಲ್ ಪೀಸ್ ಯೂನಿವರ್ಸಿಟಿಯಿಂದ ಅತ್ಯುನ್ನತ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.
ಹಿರಿಯಡ್ಕದಲ್ಲಿ ಹುಟ್ಟಿ ದೈವಾರಾಧನಾ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ರೀತಿಯಲ್ಲಿ ನಾಗಸ್ವರ ವಾದನ ಮಾಡಿದವರು ಪಾಂಡಣ್ಣ. ಉಡುಪಿ ಶೈಲಿಯ ನಾಗಸ್ವರ ವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯ ಸಿದವರು, ಅಲ್ಲದೆ ಕೊಳಲು, ಶಹನಾಯಿ ವಾದನವನ್ನು ದೈವ ಕೊಡಿ ಅಡಿಯಲ್ಲಿ ಮಾಡಿ ಜನಮನ್ನಣೆ ಗಳಿಸಿದವರು. ಸಾಕ್ಸೊಪೊನ್ ವಾದಕರು ಮತ್ತು ಯಕ್ಷಗಾನ ದ ಮೇರು ಕಲಾವಿದರ ಜೊತೆ ಗಾನವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದವರು. ಮೈಸೂರು ಆಸ್ಥಾನ ಕಲಾವಿದರ ಜೊತೆ ಸಂಗೀತ ಕಛೇರಿ ಗಳಲ್ಲಿ ಭಾಗವಹಿಸಿದವರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರಾಟೆ ಪಟುವಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದು ಮುಖ್ಯ ತೀರ್ಪು ಗಾರಾಗಿದ್ದಾರೆ.. ರಂಗಭೂಮಿ ಯಲ್ಲಿ ನಟಿಸಿ, ನಿರ್ದೇಶಿಸುವ ಇವರು 300 ಕ್ಕು ಮಿಕ್ಕಿದ ನಾಟಕದಲ್ಲಿ ಅಭಿನಯಿಸಿದ್ದಾರೆ.
ಕರಾವಳಿಯ ಅವಳಿ ಜಿಲ್ಲೆಯ ಖ್ಯಾತ ಜಾನಪದ ಕಲಾ ನೃತ್ಯ ತಂಡ ಗಳ ಜೊತೆ ರಾಜ್ಯ ಹೊರ ರಾಜ್ಯ ಗಳಲ್ಲಿ ನೃತ್ಯಕ್ಕೆ ವಾದ್ಯ ಸಂಗೀತ ನೀಡಿದವರು. ಸಂಗೀತ ಕ್ಷೇತ್ರದಲ್ಲಿ ಹಾಡುಗಳಿಗೆ ಸಾಹಿತ್ಯ , ಸಂಗೀತ ನೀಡಿದ್ದಾರೆ, ಉಡುಪಿಯ ಸಾಂಪ್ರದಾಯಿಕ ಹುಲಿವೇಷ ತಂಡದಲ್ಲಿ ಹುಲಿವೇಷ ಧರಿಸಿ ಅಕ್ಕಿ ಮುಡಿ ಎಸೆತಗಳಲ್ಲಿ ಪ್ರಥಮ ಬಹುಮಾನ ಹಾಗು ಉಡುಪಿ ಶ್ರೀಕೃಷ್ಣ ಮಠದ ಸ್ವಾಮೀಜಿ ಅವರಿಂದ ಬಂಗಾರ ಪದಕ ಪಡೆದಿದ್ದಾರೆ, ಮಂಗಳೂರು ಹುಲಿವೇಷ ಕ್ಕೆ ಸೀಮಿತ ವಾಗಿರುವ ಹೈ ಜಂಪ್ , ಸ್ಟಂಟ್ಸ್ ಗಳನ್ನು ಉಡುಪಿ ಜಿಲ್ಲೆಗೆ ಪರಿಚಯಸಿದವರು ಇವರಾಗಿದ್ದು, ಇವರ ತುಳು ಲ್ಯಾಂಡ್ ಡಿಜೆ ಸಾಂಗ್ ಯುವ ಮನಸಿನಲ್ಲಿ ಹಸಿರಾಗಿದೆ.
ಹಾಸ್ಯ ಪ್ರವೃತ್ತಿಯ ಇವರು ದೈವ ರಾದನ ಕ್ಷೇತ್ರ, ದೇವಾಲಯ, ನಾಟಕ, ಯಕ್ಷಗಾನ, ಕ್ರೀಡೆ, ಧಾರ್ಮಿಕ, ಸಾಹಿತ್ಯ, ಸೇವಾ ಮನೋಭಾವ, ಸಿನಿಮಾರಂಗ, ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಹಲವಾರು ಪುರಸ್ಕಾರ ಗಳು ಬಂದಿವೆ. ದೈವ ದೇವರ ಮತ್ತು ಗುರು ಹಿರಿಯರ , ಕಿರಿಯರ ಮತ್ತು ಅಭಿಮಾನಿಗಳ ಆಶೀರ್ವಾದದಿಂದ ಪಾಂಡುರಂಗ ಪಡ್ಡಮ್ ಅವರು ಬೆಂಗಳೂರು ಭಾರತೀಯ ವಿದ್ಯಾ ಭವನ ದಲ್ಲಿ ಅಮೇರಿಕಾದ ಇಂಟರ್ ನ್ಯಾಷನಲ್ ವರ್ಚುವಲ್ ಪೀಸ್ ಯೂನಿವರ್ಸಿಟಿಯಿಂದ ಅತ್ಯುನ್ನತ ಗೌರವ ಡಾಕ್ಟರೇಟ್ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.