ಕುಂದಾಪುರ ಡಿ 17 : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ಡಿ.17ರ ಭಾನುವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನ ಹುಬ್ಬಳ್ಳಿ ಮೂಲದ ಹನೀಫ್ (55) ಎಂದು ಗುರುತಿಸಲಾಗಿದ್ದು, ಟ್ರಕ್ನಲ್ಲಿದ್ದ ಕ್ಲೀನರ್ಗೆ ಗಂಭೀರ ಗಾಯಗಳಾಗಿದೆ. ಅಪಘಾತಗಳಾದ ವಾಹನಗಳನ್ನ ಕೊಂಡೊಯ್ಯುವ ವಾಹನ ವಿಶ್ರಾಂತಿಗೆಂದು ವತ್ತಿನೆಣೆಯಲ್ಲಿ ನಿಲ್ಲಿಸಿದ್ದ ಸಂದರ್ಭ ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಪೇಪರ್ ಸಾಗಿಸುವ ಟ್ರಕ್ನ ಸ್ಟೇರಿಂಗ್ ತುಂಡಾದ ಪರಿಣಾಮ ನಿಯಂತ್ರಣ ತಪ್ಪಿ ನಿಂತಿದ್ದ ವಾಹನಕ್ಕೆ ಬಂದು ಬಡಿದಿದೆ. ಘಟನೆಯಲ್ಲಿ ನಿಂತಿದ್ದ ವಾಹನದ ಚಾಲಕ ಹನೀಫ್ ಮೃತಪಟ್ಟಿದ್ದಾನೆ. ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್, ಠಾಣಾಧಿಕಾರಿ ತಿಮ್ಮೇಶ್ ಬಂದು ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.