Karavali
ಬೆಳ್ತಂಗಡಿ: 'ಕುಟುಂಬದ ಬಂಧುವನ್ನು ಕಳೆದುಕೊಂಡಂತಾಗಿದೆ' - ಏರ್ಯ ಬಗ್ಗೆ ಹೆಗ್ಗಡೆ ಅವರ ನೋವಿನ ಮಾತು
- Sun, Jul 28 2019 05:52:59 PM
-
ಬೆಳ್ತಂಗಡಿ, ಜು 28 (Daijiworld News/MSP): ಶ್ರೀ ಲಕ್ಷ್ಮೀನಾರಾಯಣ ಆಳ್ವ ಅವರದೇಹಾಂತ್ಯದಿಂದ ನಮ್ಮಕ್ಷೇತ್ರದ ಮತ್ತು ನಮ್ಮಕುಟುಂಬದಆತ್ಮೀಯರೊಬ್ಬರನ್ನು ಕಳೆದುಕೊಂಡಿದ್ದೇವೆ. ನಮ್ಮಕುಟುಂಬದ ಬಂಧುಗಳೊಬ್ಬರು ಸ್ವರ್ಗಸ್ಥರಾದಂತೆ ನನಗೆ ಭಾವನೆ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಖೇದ ವ್ಯಕ್ತಪಡಿಸಿದ್ದಾರೆ.
ಅವರುತಮ್ಮ ಸಂತಾಪ ಪ್ರಕಟಣೆಯಲ್ಲಿ, ಸುಮಾರು 55 ವರ್ಷಗಳಿಗೂ ಹಿಂದೆಒಂದು ಬಾರಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ನನ್ನತಂದೆಕೀರ್ತಿಶೇಷ ಪೂಜ್ಯ ಡಿ. ರತ್ನವರ್ಮ ಹೆಗ್ಗಡೆಅವರಜೊತೆಗೆ ನಾನು ಕಾರಿನಲ್ಲಿ ಬರುತ್ತಿದ್ದೆ. ಬಂಟ್ವಾಳ ಪೇಟೆಯನ್ನುದಾಟುವಾಗ ಪೂಜ್ಯರುಚಾಲಕನೊಡನೆ ಹೇಳಿದ ಮಾತುಗಳಿವು:ಏರ್ಯ ಲಕ್ಷ್ಮೀನಾರಾಯಣ ಆಳ್ವರಂತಹ ಒಬ್ಬ ಸಜ್ಜನ, ಸಮಾಜ ಸೇವಕ ವ್ಯಕ್ತಿಯನ್ನುಚುನಾವಣೆಯಲ್ಲಿ ಸೋಲಿಸಿದ್ದಾರಂತೆ (ಬಹುಶಃ ತಾಲ್ಲೂಕು ಪಂಚಾಯತ್ ಚುನಾವಣೆ ಇರಬೇಕು) ಅವರಂತಹ ವ್ಯಕ್ತಿಗೆಇಂತಹ ಸೋಲು ಬರಬಾರದಿತ್ತು. ಎಂದುಅವರು ಹೇಳಿದ್ದು ಮರೆಯಲಾಗಲಿಲ್ಲ.
ನನಗೆ ಆಳ್ವರ ಪರಿಚಯ ಇರಲಿಲ್ಲ. ಅವರನ್ನು ನೋಡಿದ್ದೂ ಇಲ್ಲ. ಆದರೆ ಮುಂದೆ ಶ್ರೀ ಆಳ್ವರು ಪ್ರತಿವರ್ಷ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬಂದಾಗ, ನಮ್ಮಿಬ್ಬರ ವ್ಯಕ್ತಿತ್ವಗಳೇ ಆಕರ್ಷಿಸಿಕೊಂಡಿರಬೇಕು. ನೋಡಿದತಕ್ಷಣ ಮುಖದ ನಗುವೇ ನಮ್ಮನ್ನು ಬರಸೆಳೆಯುತ್ತಿತ್ತು. ಯಾರಿಗೂ, ಅಂದರೆ ಭೇಟಿಗೆ ಬಂದಇತರರಿಗೆ ಹಾಗೂ ಭಕ್ತರಿಗೆ ನಮ್ಮಿಂದತೊಂದರೆಆಗಬಾರದೆಂದು, ನಿಧಾನವಾಗಿ ಕುಳಿತು, ನಿಮ್ಮಒತ್ತಡದ ಕಾರ್ಯಗಳನ್ನು ಮುಗಿಸಿಕೊಳ್ಳಿ. ಆ ಬಳಿಕ ಮಾತನಾಡುತ್ತೇನೆಎಂದು ಹೇಳಿ, ನನ್ನ ಭೇಟಿಯ ಚಟುವಟಿಕೆಗಳನ್ನು ಆಳ್ವರು ಗಮನಿಸುತ್ತಿದ್ದರು. ನನಗೂ ಆ ಸಂದರ್ಭವೇ ಬೇಕಾಗುತ್ತಿತ್ತು. ಏಕೆಂದರೆ, ಇತರರಲ್ಲಿ ವ್ಯಾವಹಾರಿಕ ಮಾತುಅಥವಾಅವರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ಸಂದರ್ಭಗಳಿದ್ದರೆ,ಆರಾಮವಾಗಿ ಕುಳಿತು ಮಾತನಾಡಬೇಕೆನ್ನುವ ಇಚ್ಛೆ ಇರುತ್ತಿತ್ತು.
ಆ ಬಳಿಕ ನನ್ನ ಮಾತೃಶ್ರೀ ರತ್ನಮ್ಮನವರು, ಬಳಿಕ ಪತ್ನಿ ಶ್ರೀಮತಿ ಹೇಮಾವತಿ, ಕೆಲವೊಮ್ಮೆ ಸಹೋದರರು ಮತ್ತುಕುಟುಂಬದ ಆಪ್ತ ಬಂಧುಗಳೊಂದಿಗೆ ಆಳ್ವರು, ಮಾತನಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಈ ಮಾತುಕತೆಗಳು ರಾತ್ರಿಗಂಟೆ ೧೨ ರಿಂದಒಂದುಗಂಟೆವರೆಗೂ ಸಾಗುತ್ತಿತ್ತು. ಇಲ್ಲಿ ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳು, ಮಧ್ಯೆ ಮಧ್ಯೆರಾಜಕೀಯ ವಿಚಾರಗಳೂ ಬರುತ್ತಿದ್ದವು.ಸಹೃದಯರಾದ ಶ್ರೀ ಆಳ್ವರು ಧನಾತ್ಮಕ ಚಿಂತನೆಗಳು ಮತ್ತುಋಣಾತ್ಮಕ ಚಿಂತನೆಗಳನ್ನು ಮಾಡಿ, ಅದೂಇಲ್ಲ, ಇದೂಇಲ್ಲ, ಅಲ್ಲಿಯೂ ಸಲ್ಲ, ಇಲ್ಲಿಯೂ ಸಲ್ಲಎಂದುಯಾರ ಬಗ್ಯೆಯೂ ವೈಯಕ್ತಿಕವಾಗಿ ವ್ಯಕ್ತಿತ್ವವನ್ನು ಅಗ್ಗವಾಗಿ ಮಾತನಾಡುವವರಲ್ಲ. ಎಂದೂ ಸ್ಪಷ್ಟ ನಿಲುವಿನ ಧನಾತ್ಮಕ ಮಾತು.
ಸಮಾಜದ, ವಿಶೇಷವಾಗಿ ತುಳುನಾಡಿನ ಧಾರ್ಮಿಕ ಆಚರಣೆಗಳು, ನಂಬಿಕೆ-ನಡವಳಿಕೆಗಳು, ದೇವಸ್ಥಾನದ ಆಚರಣೆಗಳು, ದೈವಸ್ಥಾನ ಮತ್ತು ಭೂತಸ್ಥಾನಗಳ ವಿಚಾರದಲ್ಲಿ ಆಳವಾದ ಅನುಭವ ಮತ್ತು ವಾಸ್ತವಿಕ ವಿಚಾರಗಳನ್ನು ಅವರು ತಿಳಿದವರಾಗಿದ್ದರು.
ಸ್ವಾತಂತ್ರ್ಯ ಪೂರ್ವದ ತುಳುನಾಡಿನ ಜನಜೀವನವನ್ನುಕಂಡವರು ಶ್ರೀ ಆಳ್ವರು. ಅಂತೆಯೇ ಸ್ವಾತಂತ್ರ್ಯೋತ್ತರ ತುಳುನಾಡಿನಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿವರ್ತನೆಗಳಿಂದಾಗಿ ಈ ಮೇಲಿನ ಸಾಂಪ್ರದಾಯ, ಆಚಾರ-ವಿಚಾರಗಳ ಮತ್ತು ಶ್ರದ್ಧೆಯ ಬಗ್ಯೆ ವ್ಯತ್ಯಾಸಗಳನ್ನು ಗುರುತಿಸುತ್ತಿದ್ದರು. ಕೆಲವು ಬಾರಿ ನೋವಿನಿಂದ ಸಂಕಟ ಪಡುತ್ತಿದ್ದರು. ಬುನಾದಿ ಅಥವಾ ಪಂಚಾಂಗ ಗಟ್ಟಿಯಾಗಿರಬೇಕು. ಅದರ ಮೇಲಿನ ರಚನೆಗಳು ಕಾಲಕಾಲಕ್ಕೆ ಬದಲಾವಣೆ ಆಗಬಹುದು ಮತ್ತು ಬದಲಾಗುವುದು ಸಹಜಎನ್ನುವಧೋರಣೆಯನ್ನುಅವರು ಹೊಂದಿದ್ದರು. ಹಾಗಾಗಿ ನಮ್ಮಧಾರ್ಮಿಕ ಆಚರಣೆಗಳ ಜವಾಬ್ದಾರಿಇರುವ ಆಡಳಿತದಾರರು, ಧರ್ಮದರ್ಶಿಗಳು, ಬೀಡು ಮತ್ತುಗುತ್ತಿನಗುರಿಕಾರರುಇವರ ಬಗ್ಯೆ ಅಭಿಪ್ರಾಯಗಳನ್ನು ಕೊಡುತ್ತಿದ್ದರು. ಅಷ್ಟೇ ಎಚ್ಚರಿಕೆಯಿಂದ ಈ ಧಾರ್ಮಿಕ ಆಚರಣೆಗಳಿಗೆ ಬೇಕಾಗುವ ವಿವಿಧ ಆಚಾರ-ವಿಚಾರಗಳ ಸೇವೆ ಮಾಡುವವರುಅಥವಾಕಾರ್ಯಕರ್ತರ ಬಗ್ಯೆಯೂ ಮಾತನಾಡುತ್ತಿದ್ದರು. ಪರವ, ಪಂಬದ, ನಲಿಕೆ ಮುಂತಾದ ಶ್ರಮಜೀವಿಗಳು ತಮ್ಮಆಚರಣೆಯ ವಿಧಿ-ವಿಧಾನಗಳನ್ನು ಮಾಡುವಾಗ ಪಡುವ ಒತ್ತಡಗಳು, ಭಯದಿಂದ ಆಗುವ ಒತ್ತಡಗಳು ಮತ್ತು ಸತ್ಯದರಕ್ಷಣೆಗಾಗಿಅವರು ಮಾಡಬೇಕಾದ ಕರ್ತವ್ಯಗಳ ಬಗ್ಯೆಯೂಚಿಂತೆ ಮಾಡುತ್ತಿದ್ದರು. ಈ ಬಗ್ಯೆ ಅನೇಕ ಸಭೆಗಳನ್ನು, ಸಣ್ಣಪುಟ್ಟ ವಿಚಾರಗೋಷ್ಠಿಗಳನ್ನು ಅವರುನಡೆಸುತ್ತಿದ್ದರು.ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕಅಸಮಾನತೆ ಬಗ್ಯೆ ಸಾಕಷ್ಟು ಹೋರಾಟ ಮಾಡಿದರು. ಮಹಾತ್ಮಾಗಾಂಧೀಜಿಅವರ ಆದರ್ಶಗಳ ಹಿನ್ನೆಲೆಯಲ್ಲಿ ಖಾದಿ ಬಟ್ಟೆ ಧರಿಸುತ್ತಿದ್ದರು ಮತ್ತು ಗಾಂಧಿತತ್ವದ ಸರಳ ಜೀವನ ನಡೆಸುತ್ತಿದ್ದರು. ಅವರ ದೀರ್ಘಾಯುಷ್ಯದ ಗುಟ್ಟೇ ಇದು ಆಗಿರಬೇಕು.
ನೀಳವಾದ ಶರೀರ, ತಲೆಎತ್ತಿ ನಡೆಯುವಆತ್ಮಸ್ಥೈರ್ಯ, ಎಲ್ಲರೊಂದಿಗೆ ಬೆರೆತುಒಂದಾಗುವ ಮನಸ್ಸು, ಸಾಹಿತ್ಯಾಸಕ್ತಿಯಿಂದಾಗಿ ಸದಾಕೈಯಲ್ಲಿಒಂದು ಪುಸ್ತಕ, ಅತ್ಯಂತ ಸರಳ ಜೀವನ- ಈ ಕಾರಣದಿಂದಾಗಿಪರಿಗ್ರಹಗಳನ್ನು ದೂರಮಾಡಿ ಅಪರಿಗ್ರಹತತ್ವದ ಮೇಲೆ ಬದುಕಿದವರು ಆಳ್ವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಅವರು ನಮ್ಮ ಕ್ಷೇತ್ರದ ಚಟುವಟಿಕೆಗಳನ್ನು ಬಹುವಾಗಿ ಮೆಚ್ಚಿಕೊಂಡವರು. ಅವರಿಗೆ ಪ್ರಿಯವಾಗಿದ್ದ, ಆತ್ಮೀಯವಾಗಿದ್ದ ಗ್ರಾಮದ ಮತ್ತು ಸಮಾಜದ ಅತ್ಯಂತ ಕನಿಷ್ಠ ವ್ಯಕ್ತಿಗಳ ಬಗ್ಗೆ ಯೋಜಿತ ಕಾರ್ಯಕ್ರಮಗಳು ಅವರಿಗೆ ಪ್ರಿಯವಾಗಿದ್ದವು. ಸ್ವಾಭಾವಿಕವಾಗಿಯೇ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರದಲ್ಲಿ ನೀಡುವ ಮಾರ್ಗದರ್ಶನ, ತರಬೇತಿ ಅವರಿಗೆ ಪ್ರಿಯವಾದ ವಿಷಯವಾಗಿತ್ತು.
ನಮ್ಮ ಕಾರ್ಯಕ್ರಮಗಳನ್ನು ರೂಪಿಸಿದ ಮೇಲೆ ಅವರೊಂದಿಗೆ ಚರ್ಚಿಸಿದಾಗ, ಅವರುಅದನ್ನು ಆಳವಾಗಿ ಅರ್ಥೈಸಿಕೊಂಡು ಕೆಲವು ಸಲಹೆಗಳನ್ನು ನೀಡುತ್ತಿದ್ದರು. ಅವರಿಗೆ ಪ್ರಾಚೀನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಇದ್ದ ಗೌರವದಿಂದಾಗಿ ನಮ್ಮ ಧರ್ಮೋತ್ಥಾನ ಟ್ರಸ್ಟ್ನ ಸಲಹಾ ಮಂಡಳಿ ಸದಸ್ಯರಾಗಿಯೂ ಅವರು ಸೇವೆ ಮಾಡಿದ್ದಾರೆ. ಟ್ರಸ್ಟ್ ವತಿಯಿಂದ ಮಾಡಿದ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಅವರಿಗೆ ಪ್ರಿಯವಾದ ವಿಷಯವಾಗಿತ್ತು. ದೇವಾಲಯಗಳು, ಮಠ-ಮಂದಿರಗಳ ಧಾರ್ಮಿಕ ಕಾರ್ಯಗಳಲ್ಲಿಆಳ್ವರ ಉಪಸ್ಥಿತಿ ಅನಿವಾರ್ಯವಾಗಿತ್ತು.
ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಆಹ್ವಾನಿಸಬೇಕು ಎಂದು ಮತ್ತುಎಲ್ಲೆಲ್ಲೂ ಚರ್ಚೆಗಳು ಬಂದಾಗ ಅನಿವಾರ್ಯವಾಗಿ ಮೊದಲ ಆಯ್ಕೆ ಆಳ್ವರ ಹೆಸರು. ಅವರು ಇಳಿವಯಸ್ಸಿನಲ್ಲಿಯೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈಗೀಗ ನನಗೆ ಸ್ವಲ್ಪಆಯಾಸವಾಗುತ್ತಿದೆಎಂದುಅವರು ಹೇಳುತ್ತಿದ್ದರು. ತನ್ನ 92ನೆ ವಯಸ್ಸಿನ ವರೆಗೂ ಯಾವುದೇ ಆಹ್ವಾನವನ್ನು ಅವರು ತಿರಸ್ಕರಿಸಿದವರಲ್ಲ. ಆಳ್ವರ ಸಾಹಿತ್ಯ ಪ್ರೇಮ ಸರ್ವವಿದಿತ. ಕವಿಗಳು, ಸಾಹಿತಿಗಳು ಮತ್ತುಕಲಾವಿದರ ಆತ್ಮೀಯ ಸಂಪರ್ಕ ಅವರಿಗಿತ್ತು.
ಅವರು ಧರ್ಮಸ್ಥಳಕ್ಕೆ ಬಂದು ನಮ್ಮೊಂದಿಗೆ ಕುಳಿತು ಸಾಹಿತ್ಯ ವಿಮರ್ಶೆ, ವಿಶ್ಲೇಷಣೆ ಮಾಡುತ್ತಿದ್ದಾಗ ನನ್ನ ಸಹೋದರ ಸುರೇಂದ್ರ, ಅಜ್ಜನಿಗೆಕೀಟಲೆಕೊಡುವ ಮೊಮ್ಮಗನಂತೆಕೀಟಲೆ ಮಾಡುತ್ತಿದ್ದ. ಅಷ್ಟಾವಧಾನದಲ್ಲಿ ಬೇರೆ ಬೇರೆರೀತಿಯಲ್ಲಿ ಪ್ರಶ್ನೆ ಕೇಳುವವರಿದ್ದರೂ ಮಧ್ಯೆ ಮಧ್ಯೆ ಅಪ್ರಸ್ತುತ ಪ್ರಸಂಗಿ ಎಂಬ ಒಬ್ಬ ವ್ಯಕ್ತಿಇರುತ್ತಾನೆ. ಅಂತೆಯೇ ಸುರೇಂದ್ರಅವರಿಗೆಸಾಕಷ್ಟು ಕೀಟಲೆ ಮಾಡುತ್ತಿದ್ದ. ಮಧ್ಯೆಅವರಿಗೆ ಹಿಂಸೆ ಮಾಡಬೇಡಎಂದು ನಾನು ಹೇಳುತ್ತಿದ್ದೆ. ಕವಿಯ ಮಾತನ್ನು ಕೇಳುವ ಕಿವಿ ಇಲ್ಲದಿದ್ದರೆಅವರಕವಿತ್ವ, ಸಾಹಿತ್ಯ ನಷ್ಟವಾಗುತ್ತದೆ. ಆಳ್ವರೆ, ನೀವು ಕವಿ ನಾನು ಕಿವಿ ಎಂದು ಸುರೇಂದ್ರ ಹೇಳುತ್ತಿದ್ದ.
ನಮ್ಮ ಮಗಳು ಶ್ರದ್ಧಾಳ ಮದುವೆ ಸಂದರ್ಭ ಶ್ರೀಮತಿ ಹೇಮಾವತಿ ತನ್ನ ಸಾಹಿತ್ಯರಚನಾ ಸಾಮರ್ಥ್ಯದಿಂದ ಕೆಲವು ಶೋಭಾನೆ ಹಾಡುಗಳನ್ನು ರಚಿಸಿ ಸ್ಥಳೀಯ ಸಂಗೀತಗಾರರಿಂದ ಹಾಡಿಸಿದರು. ಆ ಸಂದರ್ಭದಲ್ಲಿನಾನು ಆಳ್ವರ ಜೊತೆಗೆ ಕುಳಿತಿದ್ದೆ. ಮಧ್ಯೆ ಆಳ್ವರು ನನ್ನಎಡಕೈಯನ್ನು ಹಿಡಿದು ಖಾವಂದರೆ, ಆ ಪದ್ಯೊನುಉಂತಾವರೆ ಪನ್ಲೆ ಎಂದು ಹೇಳಿದರು. ನಾನು ಆಶ್ಚರ್ಯಚಕಿತನಾಗಿ ನೋಡಿದಾಗ ಆಳ್ವರ ಕಣ್ಣುಗಳಲ್ಲಿ ಧಾರಾಕಾರವಾಗಿಕಣ್ಣೀರು ಹರಿಯುತ್ತಿತ್ತು. ಇಂತಹ ಶೋಭಾನೆ ಹಾಡನ್ನು ಕೇಳಿದ ಮೇಲೆ ಮಗಳನ್ನು ಮನೆಯಿಂದ ಹೇಗೆ ಕಳುಹಿಸಿ ಕೊಡುತ್ತೀರಿ? ನನಗೂ ಒಬ್ಬಳೇ ಮಗಳು. ನನ್ನಿಂದಇದನ್ನು ಸಹಿಸಲಾಗುವುದಿಲ್ಲ ಎಂದುಅವರು ಭಾವುಕರಾದರು.
ಇಂತಹ ಸಹೃದಯ, ಸಜ್ಜನ ಆಳ್ವರನ್ನು ಒಮ್ಮಿಂದೊಮ್ಮೆಲೆ ಕಳೆದುಕೊಂಡಾಗ ದುಃಖವೂಆಯಿತು. ಆ ಮೇಲೆ ತಕ್ಷಣ ಚೇತರಿಸಿಕೊಂಡೆ. ಏಕೆಂದರೆ ಸರ್ವಧರ್ಮೀಯರನ್ನೂ ಪ್ರೀತಿಸಿ, ಹಿಂದೂಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದ ಅವರಎಂತಹ ಶ್ರೇಷ್ಠ ಬದುಕನ್ನು ನಡೆಸಿದ್ದಾರೆ ಅಂದರೆ ಅವರ ಮರಣಕ್ಕೆ ದುಃಖ ಪಡುವ ಬದಲುಅವರ ಆದರ್ಶಗಳನ್ನು ಸದಾ ನಮ್ಮೊಂದಿಗಿಟ್ಟುಕೊಂಡು ಜಾಗೃತರಾಗಿರುವುದೇಅವರಿಗೆಕೊಡುವ ಸೂಕ್ತ ಗೌರವಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡುವಂತೆ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.