ಮಂಗಳೂರು, ಜು 27 (Daijiworld News/MSP): ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ತೀವ್ರವಾಗಿ ವ್ಯಾಪಿಸುತ್ತಿದೆ. ಆದರೆ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ನಿಷ್ಕ್ರಿಯರಾಗಿದ್ದು , ಡೆಂಗ್ಯೂ ಕಾರಣದಿಂದಾಗಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜು. 27 ರ ಶನಿವಾರ ನಗರದದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಡೆಂಗ್ಯೂ ಜ್ವರ ಹರಡದಂತೆ ಜಿಲ್ಲಾಡಳಿತ ತಕ್ಷಣ ಸೂಕ್ತ ಕಾರ್ಯಾಚರಣೆ ನಡೆಸಿ ಜನರಿಗೆ ನೆರವಾಗಬೇಕಾಗಿದೆ ಎಂದರು.
ಜನ ಸಮಸ್ಯೆಯಿಂದ ಬಳಲುತ್ತಿದ್ದರೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣ ನಿಷ್ಕ್ರೀಯರಾಗಿದ್ದಾರೆ. ಇಲ್ಲಿನ ಶಾಸಕರು ಡೆಂಗ್ಯೂ ಪೀಡಿತ ಜನರ ಬಗ್ಗೆ ಯೋಚಿಸುವುದಕ್ಕಿಂತ ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸಬಹುದು ಎಂಬ ಚಿಂತೆಯಲ್ಲಿಯೇ ಮುಳುಗಿದ್ದರು. ರೆಸಾರ್ಟ್ನಲ್ಲಿ ಕುಳಿತು ಆನಂದಿಸುವುದನ್ನು ಬಿಟ್ಟು ಜನಪ್ರತಿನಿಧಿಗಳಾಗಿ ಜನಹಿತವನ್ನು ಕಾಪಾಡಲಿ ಎಂದರು.
ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವುದು ಆಪರೇಶನ್ ಕಮಲವಲ್ಲ ಅದು ಕುದುರೆ ವ್ಯಾಪಾರ ಎಂದು ಅವರು ಟೀಕಿಸಿದರು .ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಲೆಟ್ ಪಿಂಟೊ ಮತ್ತು ಇತರರು ಉಪಸ್ಥಿತರಿದ್ದರು.