ಮಂಗಳೂರು, ಜು 27(Daijiworld News/MSP): ನಗರದ ಮಾಲೆಮಾರ್ ನೆಕಿಲಗುಡ್ಡೆ ಎಂಬ ಪ್ರದೇಶದಲ್ಲಿ ಮಂಗಳಾದೇವಿ ನಿವಾಸಿ ರತನ್ ರಾಜ್ (28) ಎಂಬವರ ಮೇಲೆ ಕೋಡಿಕಲ್ ನಿವಾಸಿ ಧೀರಜ್ (25) ಎಂಬಾತ ಜು. 25 ರ ಗುರುವಾರ ತಡರಾತ್ರಿ ಇರಿದು ಕೊಲೆಗೆ ಯತ್ನಿಸಿದ್ದಾರೆ. ಆರೋಪಿ ಧೀರಜ್ ಪರಾರಿಯಾಗಿದ್ದು ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರತನ್ ರಾಜ್ ಗೆ ಧೀರಜ್ ಮೇಲೆ ಹಿಂದಿನಿಂದಲೂ ವೈಮನಸ್ಸಿದ್ದು ಈ ಬಗ್ಗೆ ಆತ ತನ್ನ ಗೆಳೆಯ ಪುನೀತ್ ಎಂಬಲ್ಲಿ ಹೇಳಿಕೊಂಡಿದ್ದ. ಇದಕ್ಕೆ ಪುನೀತ್ ನಿಮ್ಮಿಬ್ಬರನ್ನು ರಾಜಿ ಸಂಧಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದ. ಅದರಂತೆ ಗುರುವಾರ ರಾತ್ರಿ ಪುನೀತ್ ಕರೆ ಮಾಡಿ ರತನ್ ರಾಜ್ ಮತ್ತು ಧೀರಜ್ ನಡುವಿನ ಮಾತುಕತೆ ವಾಗ್ವಾದಕ್ಕೆ ತಿರುಗಿದೆ. ಆಕ್ರೋಶಗೊಂಡ ಧೀರಜ್ ತಾನು ಬೈಕ್ ನಲ್ಲಿ ಅಡಗಿಸಿಟ್ಟ ಚೂರಿಯಿಂದ ರತನ್ ರಾಜ್ ಗೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ರಾಜಿ ಸಂಧಾನಕ್ಕೆ ಕರೆಯಿಸಿದ್ದ ಪುನೀತ್ ಗೆ ಆತ ಮಾರಕಾಸ್ತ್ರ ತಂದಿರುವ ವಿಚಾರ ತಿಳಿದಿರಲಿಲ್ಲ ಎನ್ನಲಾಗಿದೆ. ಗಾಯಾಳು ರತನ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕಾವೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.