ಪುಂಜಾಲಕಟ್ಟೆ, ಜು 26 (Daijiworld News/MSP): ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣಕ್ಕೆ ಇಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ದಿಲೀಪ್, ಹರೀಶ್, ಇಕ್ಬಾಲ್, ಲತೀಫ್, ಶೇಖರ್, ಸತೀಶ್, ಶೇಖರ ಆಚಾರಿ ಎಂದು ಗುರುತಿಸಲಾಗಿದೆ. ಜುಗಾರಿಗೆ ಬಳಸಿದ್ದ 1,53,370 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 1320 ರೂ ಹಣ, ಇಸ್ಪೀಟ್ ಎಲೆಗಳು, ನೀಲಿ ಬಣ್ಣದ ಟರ್ಫಲ್, ಮೋಟಾರ್ ಸೈಕಲ್ ಹಾಗೂ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪುಂಜಾಲಕಟ್ಟೆ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ಸೌಮ್ಯ ಜೆ ಹಾಗೂ ಸಿಬ್ಬಂದಿಗಳಾದ ನಾರಾಯಣ ಎಎಸ್ಐ ಮತ್ತು ಪಿ ಸಿ ಗಳಾದ ಸಾಬು ಮಿರ್ಜಿ , ಹರೀಶ್ ಪಾಲ್ಗೊಂಡಿದ್ದರು.