ಮಂಗಳೂರು, ಜು25(Daijiworld News/SS): ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಪಠ್ಯೇತರ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಸೈಂಟ್ ಜೋಸೆಫ್ ಹಿ. ಪ್ರಾ. ಶಾಲೆ ವಾಮಂಜೂರು ಇವರ ಸಹಯೋಗದಲ್ಲಿ ತಿರುವೈಲ್ ಕ್ಲಸ್ಟರ್'ನ ಪ್ರತಿಭಾ ಕಾರಂಜಿಯು ನಡೆಯಿತು.
ಈ ಪ್ರತಿಭಾ ಕಾರಂಜಿಯಲ್ಲಿ 10 ಶಾಲೆಗಳ ಸುಮಾರು 450 ವಿಧ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದರು. ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹನಿರ್ದೇಶಕರು ವಂ. ಫಾ. ರೋಹಿತ್ ಡಿಕೋಸ್ತ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆಗೈದರು.
ಈ ವೇಳೆ ತಿರುವೈಲ್ ಕ್ಲಸ್ಟರ್'ನ ಸಿ.ಆರ್. ಪಿ ಪುಷ್ಪಾವತಿ, ಕಿನ್ನಿಕಂಬ್ಳ ಕ್ಲಸ್ಟರ್ ಸಿ.ಆರ್.ಪಿ. ಐರಿನ್, ಶಿಕ್ಷಕ -ರಕ್ಷಕ ಸಂಘದ ಪಧಾಧಿಕಾರಿಗಳು ನಾಗೇಶ್ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರೇಷ್ಮಾ ರೇಖಾ ಹಾಗೂ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಲ್ಲೇಶ್ ಉಪಸ್ಥಿತರಿದ್ದರು.
ಸೈಂಟ್ ಜೋಸೆಫ್ ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಕ್ವೀನಿ ಆನ್ನಿ ಫೆರ್ನಾಂಡಿಸ್ ಸ್ವಾಗತಿಸಿದರು. ಸಿ. ಫಿಲೋಮಿನಾ ಮತ್ತು ಅಸುಂಪ್ತಾರವರು ಕಾರ್ಯಕ್ರಮ ನಿರೂಪಿಸಿದರು.