ಕಾಸರಗೋಡು, ಜು 24 (Daijiworld News/SM): ಜ್ವರ ದಿಂದ ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಕನ್ಯಪ್ಪಾಡಿಯಲ್ಲಿ ನಡೆದಿದೆ.
ಕನ್ಯಪ್ಪಾಡಿಯ ಸಿದ್ದಿಕ್ ರವರ ಮಕ್ಕಳಾದ ಸಿಧಾರುತ್ತಲ್ ಮುಂತಾಹ್(8) ಮತ್ತು 6 ತಿಂಗಳ ಮಗು ಸಿನಾಸ್ ಮೃತಪಟ್ಟ ಪುಟಾಣಿಗಳಾಗಿದ್ದಾರೆ.ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಮುಂತಾಹ್ ನಿನ್ನೆ ಸಂಜೆ ಮೃತಪಟ್ಟಿದ್ದು, ಸಿನಾಸ್ ಇಂದು ಮೃತಪಟ್ಟಿದ್ದಾನೆ.
ಕೆಲವು ದಿನಗಳಿಂದ ಈ ಇಬ್ಬರು ಪುಟಾಣಿಗಳು ಜ್ವರ ಪೀಡಿತರಾಗಿದ್ದರು. ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮಕ್ಕಳ ತಾಯಿಗೂ ಜ್ವರ ತಗಳಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಮಕ್ಕಳ ಸಾವಿನ ಹಿನ್ನಲೆಯಲ್ಲಿ ವೈದ್ಯಕೀಯ ತಂಡವು ಭೇಟಿ ನೀಡಿ ತಪಾಸಣೆ ನಡೆಸಿದೆ. ರೋಗ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಿದೆ. ಪರಿಸರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.