ಬಂಟ್ವಾಳ, ಜು 23 (Daijiworld News/SM): ಬಸ್ ನಲ್ಲಿ ಹೃದಯಾಘಾತಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಜುಲೈ 23ರ ರಾತ್ರಿ ಬಿಸಿರೋಡಿನಲ್ಲಿ ನಡೆದಿದೆ. ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಈ ಘಟನೆ ನಡೆದಿದೆ.
ಬೆಳಗಾಂನ ಅಥಣಿ ನಿವಾಸಿ ಮಂಜುನಾಥ್ ಭಟ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಮೈಸೂರಿನಿಂದ ಒಬ್ಬರೇ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಟ್ವಾಳ ನಗರ ಠಾಣಾ ಸಮೀಪ ಸ್ಟೇಟ್ ಬ್ಯಾಂಕ್ ತೆರಳುವ ಬಸ್ ನಿಲ್ಲಿಸಲಾಗಿತ್ತು. ಬಂಟ್ವಾಳ ನಗರ ಠಾಣಾ ಪೋಲೀಸರು ಬಸ್ ಬಳಿ ಬಂದು ವಿಚಾರಣೆ ನಡೆಸಿದ್ದು, ಅವರ ಗುರುತು ಪತ್ತೆ ಹಚ್ಚಿದ್ದಾರೆ.
ಬಸ್ ಸೀಟಿನಲ್ಲಿ ಕುಳಿತು ಕೊಂಡು ಕಿವಿಗೆ ಮೊಬೈಲ್ ಇಯರ್ ಪೋನ್ ಅಳವಡಿಸಿ ಮಲಗಿದ ಸ್ಥಿತಿಯಲ್ಲಿ ಇವರ ಮೃತಪಟ್ಟಿದ್ದಾರೆ. ಯಾರೋ ಪ್ರಯಾಣಿಕರಿಗೆ ಸಂಶಯ ಬಂದು ನೋಡಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಇವರು ಪಾಣೆಮಂಗಳೂರು ವರೆಗೂ ಮಾತನಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ.
ಆದರೆ ಬಳಿಕ ಇದ್ದಕ್ಕಿದ್ದಂತೆ ಇವರ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ. ಬಳಿಕ ನೋಡಿದಾಗ ಇವರು ಸಾವನ್ನಪ್ಪಿದ ಬಗ್ಗೆ ಸಂಶಯ ಬಂದು ಬಸ್ ನಿರ್ವಾಹಕನಿಗೆ ಸಹ ಪ್ರಯಾಣಿಕರು ತಿಳಿಸಿದ್ದಾರೆ. ಅವರು ಬಿಸಿರೋಡು ವರಗೆ ಬಂದು ಠಾಣೆ ಗೆ ದೂರು ನೀಡಿದ್ದಾರೆ.