ಮಂಗಳೂರು, ಜು21(Daijiworld News/SS): ನಗರದ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರ ಮೃತದೇಹ ಕ್ವಾಟ್ರರ್ಸ್ನಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಪ್ರೊಫೆಸರ್ ವಾಗೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಕ್ವಾಟ್ರರ್ಸ್ನಲ್ಲಿದ್ದ ವಾಗೇಶ್ ಕುಮಾರ್ಗೆ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ವೇಳೆ ಪೊಲೀಸರನ್ನು ಕರೆಸಿ, ರೂಮ್ನ ಬಾಗಿಲು ತೆರೆದು ನೋಡಿದಾಗ ಪ್ರಾಧ್ಯಾಪಕ ವಾಗೇಶ್ ಕುಮಾರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.