ಮಂಗಳೂರು, ಜು 20 (Daijiworld News/SM): ಇತ್ತೀಚೆಗೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಇಬ್ಬರು ವಿದ್ಯಾರ್ಥಿಗಳ ಮನೆಗೆ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು.
ಮಂಗಳೂರು ಗುಜ್ಜರಕೆರೆಯ ಬಾಲಕಿ ಶ್ರದ್ಧಾ ಹಾಗೂ ಬಳ್ಳಾಲಭಾಗ್ ನ 8 ವರ್ಷದ ಬಾಲಕ ಕೃಶ್ ಇವರ ಮನೆಗಳಿಗೆ ಭೇಟಿ ನೀಡಿದ ಸಂಸದರು ಕುಟುಂಬ ಸದಸ್ಯರುಗಳಿಗೆ ಸಾಂತ್ವನ ಹೇಳಿದರು. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು, ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಇರುವಂತೆ ಸಂಸದರು ಇದೇ ಸಂದರ್ಭ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ಪ್ರೇಮಾನಂದ್ ಶೆಟ್ಟಿ ಮೊದಲಾದ ನಾಯಕರು ಜತೆಗಿದ್ದರು.