ಮಂಗಳೂರು, ಜು 20 (Daijiworld News/MSP): ಸಕಲೇಶಪುರ- ಸುಬ್ರಮಣ್ಯ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ರೈಲ್ವೆ ಹಳಿಗಳ ಮೇಲೆ ಕೆಸರು ಮಿಶ್ರಿತ ಮಣ್ಣು ಹಾಗೂ ಬಂಡೆಕಲ್ಲುಗಳು ಬೀಳುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆ ಜು.21,22 ರಂದು ಎರಡು ದಿನಗಳ ಕಾಲ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಸಕಲೇಶಪುರ- ಸುಬ್ರಮಣ್ಯ ರೈಲ್ವೆ ಮಾರ್ಗದ ಸಿರಿಬಾಗಿಲು ಸಮೀಪದ ಮಣಿಬಂಡ ಎಂಬಲ್ಲಿ ಬೃಹತ್ ಗಾತ್ರದ ಬಂಡೆಗಳಲ್ಲೊಂದು ಹಳಿ ಮೇಲೆ ಉರುಳುವಂತಿದ್ದು, ಇದನ್ನು ಸ್ಪೋಟಿಸಿ ತೆರವುಗೊಳಿಸಲು ರೈಲ್ವೇ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಅಪಾಯಕಾರಿ ಬಂಡೆಗಳನ್ನು ತೆರವುಗೊಳಿಸಲು ರೈಲ್ವೆ ಸಿಬ್ಬಂದಿ ಶ್ರಮಿಸುತ್ತಿದ್ದು, ಈ ಕಾರಣಕ್ಕೆ ಹಲವು ಈ ಮಾರ್ಗದ ಹಲವು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ವ್ಯತ್ಯಯಗೊಂಡ ರೈಲ್ವೆ ಸೇವೆಗಳ ವಿವರ ಇಂತಿದೆ:
ರದ್ದುಗೊಂಡ ರೈಲು
1 ರೈಲು ಸಂಖ್ಯೆ .16575. ಜು.21ರಂದು ಸಂಚರಿಸುವ ಯಶವಂತಪುರದಿಂದ ಮಂಗಳೂರು ಎಕ್ಸ್ಪ್ರೆಸ್ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ .16576. ಜು. 22 ರಂದು ಸಂಚರಿಸುವ ಮಂಗಳೂರು ನಿಂದ ಯಶವಂತಪುರ ಎಕ್ಸ್ಪ್ರೆಸ್ ಪ್ರಯಾಣ ರದ್ದಾಗಿದೆ.
ಭಾಗಶಃ ರದ್ದು
1.ಜು.20 ರಂದು ಬೆಂಗಳೂರಿನಿಂದ ಕಾರವಾರ ಎಕ್ಸ್ಪ್ರೆಸ್ ರೈಲು ಸಂಚಾರದ ಮಂಗಳೂರು - ಕಾರವಾರ ಪ್ರಯಾಣ ರದ್ದಾಗಿದೆ.
ಜು.21 ರಂದು ಕಾರವಾರ - ಬೆಂಗಳೂರು ಎಕ್ಸ್ಪ್ರೆಸ್ ಪ್ರಯಾಣದಲ್ಲಿ ಕಾರವಾರ -ಮಂಗಳೂರು ಸೆಂಟ್ರಲ್ ನಡುವೆ ಪ್ರಯಾಣ ರದ್ದುಪಡಿಸಲಾಗಿದೆ.
. ಜು.21 ರಿಂದ ರೈಲು ಸಂಖ್ಯೆ 16514 ಕಾರವಾರ - ಬೆಂಗಳೂರು ಎಕ್ಸ್ಪ್ರೆಸ್ ಪ್ರಯಾಣವನ್ನು ಕಾರವಾರ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ಪ್ರಯಾಣ ಭಾಗಶಃ ರದ್ದುಪಡಿಸಲಾಗಿದೆ.
ರೈಲುಗಳ ತಿರುವು
1. ಜು.20 ಬೆಂಗಳೂರಿನಿಂದ ಕಣ್ಣೂರು / ಕಾರಾವಾರ ಎಕ್ಸ್ಪ್ರೆಸ್ ರೈಲು ಶ್ರವಣಬೆಳಗೋಳ, ಹಾಸನ, ಸಕಲೇಶಪುರ, ಮಂಗಳೂರು ಬದಲಿಗೆ ಬದಲಿಗೆ ಜೋಲರಪೆಟ್ಟೈ, ಸೇಲಂ, ಪಾಲ್ಘಾಟ್ ಮೂಲಕ ಸಂಚಾರ.
2. ಜು. 21ರಂದು ಸಂಚರಿಸುವ ರೈಲು ಸಂಖ್ಯೆ .16518 / 16524 - ಕಣ್ಣೂರು / ಕಾರವಾರ ಬೆಂಗಳೂರು ಎಕ್ಸ್ಪ್ರೆಸ್ ಮಂಗಳೂರು, ಸಕಲೇಶಪುರ, ಹಾಸನ, ಮೈಸೂರು ಬದಲಾಗಿ ಶೋರನೂರ್ ಪಾಲ್ಘಾಟ್, ಸೇಲಂ, ಜೋಲರ್ಪೆಟ್ಟೈ ಮೂಲಕ ಸಂಚರಿಸುವಂತೆ ಬದಲಾವಣೆ ಮಾಡಲಾಗಿದೆ.