ಮಂಗಳೂರು, ಡಿ 14: ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಜನಪ್ರಿಯಗೊಂಡ ಕಾರ್ಯಕ್ರಮ ಜ್ಯೂನಿಯರ್ ಮಸ್ತಿಯ ಮೊದಲ ಸೀಸನ್ ಯಶಸ್ವಿಯಾಗಿ ಸಮಾಪ್ತಿಯಾಗಿದ್ದು, ಎರಡನೇ ಆವೃತ್ತಿಯ ಆಡಿಷನ್ ಡಿಸೆಂಬರ್ 16 ರಂದು ಮಂಗಳೂರಿನ ಫಾರಂ ಫಿಝಾಮಾಲ್ನಲ್ಲಿ ನಡೆಯಲಿದೆ ಎಂದು ದಾಯ್ಜಿವರ್ಲ್ಡ್ ವಾಹಿನಿಯ ಪ್ರೊಡಕ್ಷನ್ ಮ್ಯಾನೇಜರ್ ಮೊಹಮ್ಮದ್ ನಿಸಾರ್ ತಿಳಿಸಿದ್ದಾರೆ.
ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾದ ಜ್ಯೂನಿಯರ್ ಮಸ್ತಿಯ ಮೊದಲ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ಕರಾವಳಿಯ ಅನೇಕ ನೃತ್ಯ ಪ್ರತಿಭೆಗಳಿಗೆ ವೇದಿಕೆಯಾಗಿ ಈ ರಿಯಾಲಿಟಿ ಶೋ ಮಾರ್ಪಟ್ಟಿತ್ತಲ್ಲದೆ ಇದರೊಂದಿಗೆ ವೀಕ್ಷಕರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬೆಸೆದುಕೊಂಡಿದೆ. ಇದೀಗ ಡಿ.16 ರಂದು ಮಂಗಳೂರಿನಲ್ಲಿ ಮತ್ತೊಮ್ಮೆ ಆಡಿಷನ್ ನಡೆಯಲಿದ್ದು ಕರಾವಳಿಯ ಪುಟ್ಟ ನೃತ್ಯ ಪ್ರತಿಭೆಗಳಿಗೆ ಹೊಸ ವೇದಿಕೆ ಕಲ್ಪಿಸಲಿದೆ.
ಕಳೆದ ಬಾರಿ ನಡೆದ ಜ್ಯೂನಿಯರ್ ಮಸ್ತಿ ಶೋ ಕರಾವಳಿಯ ಮಕ್ಕಳಿಗೆ ಒಂದು ಸ್ಫೂರ್ತಿ ನೀಡಿದ ಕಾರ್ಯಕ್ರಮವಾಗಿದ್ದು, ಅತೀ ಹೆಚ್ಚು ವೀಕ್ಷಕರನ್ನು ಗಳಿಸಿದ ರಿಯಾಲಿಟಿ ಶೋ ಕೂಡ ಇದಾಗಿತ್ತು. ಮಂಗಳೂರಿನಲ್ಲಿ ನಡೆಸಿದ ಆಡಿಷನ್ನಲ್ಲಿ ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಿಂದಲೂ ಅನೇಕ ನೃತ್ಯ ಪ್ರತಿಭೆಗಳು ಬಂದು ಭಾಗವಹಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.
ತನ್ನ ಪ್ರತೀ ಕಾರ್ಯಕ್ರಮದಲ್ಲೂ ವಿಭಿನ್ನತೆಯನ್ನು ಬಯಸುವ ಕರಾವಳಿಯ ಸ್ಥಳೀಯ ವಾಹಿನಿ ದಾಯ್ಜಿವರ್ಲ್ಡ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನ ಅವಕಾಶಕ್ಕಾಗಿ ಕಾಯುತ್ತಿದ್ದ ನೂರಾರು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಉತ್ತಮ ಕಲಾವಿದರನ್ನು ಕರಾವಳಿಯಲ್ಲಿ ಸೃಷ್ಟಿಸಿದೆ. ಜ್ಯೂನಿಯರ್ ಮಸ್ತಿ ಸೀಸನ್ 1 ರಲ್ಲಿ ಹಳ್ಳಿ ಹಳ್ಳಿಗಳಿಂದಲೂ ಹಲವಾರು ಪ್ರತಿಭೆಗಳು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಾವಳಿಯ ಮನೆ ಮಾತಾಗಿದ್ದಾರೆ. ಇದೀಗ ಜ್ಯೂನಿಯರ್ ಮಸ್ತಿ ಸೀಸನ್ - 2 ಗ್ರ್ಯಾಂಡ್ ರಿಯಾಲಿಟಿ ಶೋ ಮೂಲಕ ಕರಾವಳಿಯ ಪ್ರತಿಭೆಗಳಿಗೆ ಮತ್ತೊಮ್ಮೆ ದಾಯ್ಜಿವರ್ಲ್ಡ್ ವಾಹಿನಿ ವೇದಿಕೆ ಕಲ್ಪಿಸಲಿದೆ.
ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಜರುಗಿದ ಜ್ಯೂನಿಯರ್ ಮಸ್ತಿಯ ಮೊದಲ ಆವೃತ್ತಿಯ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ 14 ಜನ ಅಂತಿಮ ಸುತ್ತಿಗೆ ಆಯ್ಕೆಗೊಂಡಿದ್ದರು. ಕೊನೆಯ ಅದೃಷ್ಟ ಪರೀಕ್ಷೆಯಲ್ಲಿ ಪುಟಾಣಿಗಳು ವೇದಿಯಲ್ಲಿ ಜಬರ್ ದಸ್ತ್ ಸ್ಟೆಪ್ ಹಾಕಿದ್ದು, 14 ಸ್ಫರ್ಧಿಗಳಲ್ಲಿ ನಮನ ಶೆಟ್ಟಿ ಕಿನ್ನಿಗೋಳಿ ಜ್ಯೂನಿಯರ್ ಮಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಪ್ರಥಮ ರನ್ನರ್ ಅಪ್ ಆಗಿ ಗೌತಮಿ ಮತ್ತು ದ್ವಿತಿಯ ರನ್ನರ್ ಅಪ್ ಆಗಿ ಧೃತಿ ಆಚಾರ್ಯ ಸೈ ಎನಿಸಿಕೊಂಡಿದ್ದರು.
ದಾಯ್ಜಿವರ್ಲ್ಡ್ ವಾಹಿನಿ ಇದೀಗ ಜ್ಯೂನಿಯರ್ ಮಸ್ತಿ ಸೀಸನ್ – 2 ಮೂಲಕ ಮತ್ತೊಮ್ಮೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಉದಯೋನ್ಮುಖ ನೃತ್ಯ ಪ್ರತಿಭೆಗಳಿಗೆ ಆಸರೆಯಾಗಲಿದೆ. ಜ್ಯೂನಿಯರ್ ಮಸ್ತಿ ಸೀಸನ್ - 2 ಮೂಲಕ ಹೊಸ ಕನಸುಗಳನ್ನು ಹೊತ್ತ ಹೊಸ ಮುಖಗಳು, ಹೊಸ ಪ್ರತಿಭೆಗಳು, ಹೊಸ ಹೊಸ ನೃತ್ಯಗಳ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7022604553 / 7022604564