ಬಿ.ಸಿ ರೋಡ್ ಸೆ 13: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರ ತಂಡವೊಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ನಗದು ದೋಚಿರುವ ಘಟನೆ ಇಂದು ಮದ್ಯಾಹ್ನ ಬಿ.ಸಿ ರೋಡ್ ನ ನಿಲ್ದಾಣದ ಬಳಿ ನಡೆದಿದೆ.
ರಾಘವೇಂದ್ರ ಕೆ.ಪಿ ಬನ್ನಿತ್ತಾಯ ಎಂಬವರ ಮನೆಗೆ ನುಗ್ಗಿದ 3 ಜನ ಕಳ್ಳರ ತಂಡ ಸುಮಾರು 15 ಪವನ್ ಚಿನ್ನಾಭರಣ,40 ಸಾವಿರ ನಗದು, 1 ವಜ್ರದ ಕಿವಿಯೋಲೆ ಕಳವುಗೈದಿದ್ದಾರೆ. ಮನೆಮಂದಿ ಮದ್ಯಾಹ್ನ ಊಟ ಮುಗಿಸಿ ಕೆಲಸಕ್ಕೆಂದು ತೆರಳಿದ್ದು, ಆ ಬಳಿಕ ಸುಮಾರು ಮದ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾ ಪೋಲಿಸ್ ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ.