ಮಂಗಳೂರು, ಜು 20 (Daijiworld News/MSP): ಹಳೆಯ ಕ್ರೆಡಿಟ್ ಕಾರ್ಡ್ ಬದಲಾಯಿಸಿ ಹೊಸ ಕ್ರೆಡಿಟ್ ಕಾರ್ಡ್ ನೀಡುತ್ತೇನೆ ಎಂದು ಆರ್ ಬಿ ಐ ಬ್ಯಾಂಕ್ ಸಿಬ್ಬಂದಿಯಂತೆ ನಟಿಸಿ ಕ್ರೆಡಿಟ್ ಕಾರ್ಡ್ ನಂಬರ್ ಪಡೆದು ಆ ಮೂಲಕ 39,999 ರೂಪಾಯಿ ಲಪಟಾಯಿಸಿದ ಘಟನೆ ನಡೆದಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರಿಗೆ ಜು.18 ರಂದು ಅಪರಿಚಿತ ವ್ಯಕ್ತಿಯ ನಂಬರ್ ನಿಂದ ಕರೆ ಬಂದಿದ್ದು, ತನ್ನನ್ನು ತಾನು ಆರ್ ಬಿ ಐ ಸಿಬ್ಬಂದಿ ಎಂದು ಪರಿಚಯಿಸಿಕೊಂಡು , ನಿಮ್ಮ ಕ್ರೆಡಿಟ್ ಕಾರ್ಡ್ ಹಳೆಯದಾಗಿದ್ದು, ನಿಮಗೆ ಹೊಸ ಕ್ರೆಡಿಟ್ ಕಾರ್ಡ್ ನೀಡುತ್ತೇನೆ ಎಂದು ನಗರದ ವ್ಯಕ್ತಿಯೊಬ್ಬರಿಗೆ ತಿಳಿಸಿದ್ದಾನೆ.
ಬಳಿಕ ಹಳೆ ಕ್ರೆಡಿಟ್ ಕಾರ್ಡ್ ನ ಎಲ್ಲಾ ವಿವರ ಕೇಳಿದ್ದು, ಸಿವಿವಿ ನಂಬರ್ ಕೂಡಾ ಪಡೆದುಕೊಂಡಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಕ್ರೆಡಿಟ್ ಕಾರ್ಡ್ ನಿಂದ 39,999 ರೂಪಾಯಿ ಅನ್ನು ಆ ವ್ಯಕ್ತಿ ಲಪಟಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.