ಪುತ್ತೂರು, ಜು 19(Daijiworld News/MSP):ತಾಲೂಕಿನ ಪಾಣಾಜೆ ಕಲ್ಲಪದವು ಎಂಬಲ್ಲಿ ಪತಿಯೇ ತನ್ನ ಪತ್ನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಜು.18 ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಕಲ್ಲಪದವು ಕಾಲೋನಿ ನಿವಾಸಿ ಗಣೇಶ್ ಎಂಬವರ ಪತ್ನಿ ಅಕ್ಷತಾ(22) ಕೊಲೆಗೀಡಾದವರು. ಅಕ್ಷತಾ ಹಾಗೂ ಗಣೇಶ್ (35) ಅವರ ವಿವಾಹ ಒಂದು ವರ್ಷದ ಹಿಂದೆಯಷ್ಟೇ ನೆರವೇರಿತ್ತು.
ಗಣೇಶ್ ಕೂಲಿಕಾರ್ಮಿಕನಾಗಿದ್ದು, ಗುರುವಾರ ರಾತ್ರಿ ದಂಪತಿಗಳ ಮದ್ಯೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಪತಿ ಗಣೇಶ್ ರಾತ್ರಿ ಸುಮಾರು ೯.೩೦ ರ ವೇಳೆಗೆ ಪತ್ನಿಗೆ ಹಲ್ಲೆ ನಡೆಸಿ ಚೂರಿಯಿಂದ ಚುಚ್ಚಿದ್ದಾನೆ.
ಗಾಯಗೊಂಡ ಅಕ್ಷತಾ ತನ್ನ ಮನೆಯ ಪಕ್ಕದಲ್ಲೇ ಇರುವ ಗಂಡನ ತಾಯಿಯ ಮನೆಗೆ ಬಂದಿದ್ದು ಇದೇ ಸಮಯದಲ್ಲಿ ಅಕ್ಷತಾಳ ತಾಯಿಯೂ ಅಲ್ಲಿರುತ್ತಾರೆ. ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಗಣೇಶ್ ಮತ್ತೆ ಚೂರಿಯಿಂದ ಇರಿಯಲು ಯತ್ನಿಸಿದಾಗ ಅಲ್ಲಿದ್ದವರು ಆತನನ್ನು ತಡೆದಿರುತ್ತಾರೆ. ಈ ವೇಳೆ ಗಣೇಶ್ ಸ್ಥಳದಿಂದ ಓಡಿಹೊಗಿದ್ದು, ಮನೆ ಮಂದಿ ಅಕ್ಷತ ಈ ಬಗ್ಗೆ ವಿಚಾರಿಸಿದಾಗ ತಾನು ಅಡುಗೆ ಸರಿಯಾಗಿ ಮಾಡಲಿಲ್ಲ ಎಂಬ ವಿಚಾರಕ್ಕೆ ಕೋಪಗೊಂಡು ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾಳೆ. ಕುತ್ತಿಗೆ, ಮುಖ ಮತ್ತಿತರ ಕಡೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಅಕ್ಷತಾರನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಅಕ್ಷತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಂಭೀರ ಗಾಯಗೊಂಡ ಅಕ್ಷತಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದಾನೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.