ಉಡುಪಿ, ಜು19(Daijiworld News/SS): ಕೃಷ್ಣ ನಗರಿ ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾದ ಶಿರೂರು ಮಠದ ಪೀಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹರಿಪಾದ ಸೇರಿ ಇಂದಿಗೆ (ಶುಕ್ರವಾರ, ಜುಲೈ 19) ಒಂದು ವರ್ಷ ತುಂಬಿದೆ.
ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಎಂಟನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಿದ್ದರು. 1964ರಲ್ಲಿ ಶಿರೂರು ಶ್ರೀಗಳ ಜನನ. ಹೆಬ್ರಿ ಸಮೀಪ ಮಡಾಮಕ್ಕಿ ಮೂಲದ ವಿಠಲಾಚಾರ್ಯ ಮತ್ತು ಕುಸುಮಾ ದಂಪತಿ ಮಗನಾಗಿರುವ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ. ಮೂರು ಪರ್ಯಾಯವನ್ನು ಪೂರೈಸಿರುವ ಶ್ರೀಗಳು, ಎಂಟನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಿದ್ದರು.
ಶಿರೂರು ಮಠದ 30ನೇ ಯತಿಯಾಗಿದ್ದರು. 1978ರಲ್ಲಿ ಮೊದಲ ಬಾರಿ ಪರ್ಯಾಯ ಪೀಠವನ್ನೇರಿ 2010-12ರಲ್ಲಿ ಮೂರನೇ ಪರ್ಯಾಯ ಪೂರೈಸಿದ್ದರು. ಶಿರೂರು ಶ್ರೀಗಳು 1979-80, 1994-96, 2010-11ನೇ ವರ್ಷಗಳಲ್ಲಿ ಪರ್ಯಾಯ ಪಟ್ಟ ಸ್ವೀಕರಿಸಿದ್ದರು. ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿರುವ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸುಮಾರು 47ವರ್ಷ ಶ್ರೀಕೃಷ್ಣನ ಸೇವೆ ಮಾಡಿದ್ದಾರೆ. ಶ್ರೀಗಳು ಈಜು, ಡ್ರಮ್ಸ್, ಸಂಗೀತ, ಕರಾಟೆ ಪ್ರಿಯರಾಗಿದ್ದರು.
ತಮ್ಮ ಮಾನವೀಯ ಗುಣಗಳಿಂದ ಶಿರೂರು ಶ್ರಿಗಳು ದೇಶದ ಎಲ್ಲೆಡೆ ಸುದ್ದಿಯಲ್ಲಿದ್ದರು. ಆದರೆ, ಶ್ರೀಗಳ ನಿಧನದ ಸುದ್ದಿ ಕೇಳಿ ಇಡೀ ಭಕ್ತ ಸಮೂಹಕ್ಕೆ ನೋವುಂಟಾಗಿತ್ತು. ಶ್ರೀಗಳ ಅಗಲಿಕೆಯಿಂದ ಇಡಿ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿತ್ತು. ಉಡುಪಿಯ ಅಷ್ಠಮಠಾಧೀಶರಲ್ಲಿಯೇ ವಿಶಿಷ್ಠವಾಗಿದ್ದ ವ್ಯಕ್ತಿತ್ವವನ್ನು ಹೊಂದಿದ್ದ ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಶ್ರೀಗಳು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಶೀರೂರು ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸನ್ಯಾಸತ್ವವನ್ನು ತೆಗೆದುಕೊಂಡವರು. ಶ್ರೀಗಳಿಗೆ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಶ್ರೀಗಳು ಮಾರ್ಗದರ್ಶಕರಾಗಿದ್ದರು. ಶ್ರೀಗಳು ಹರಿಪಾದ ಸೇರಿ ವರುಷ ಕಳೆದರೂ ಅವರ ನೆನಪು ಮಾತ್ರ ಭಕ್ತರ ಮನದಿಂದ ಮಾಸಿ ಹೋಗಿಲ್ಲ.