ಕುಂದಾಪುರ, ಜು 18 (Daijiworld News/MSP): ಅಕ್ರಮ ಗೋ ಸಾಗಾಟ ಮತ್ತು ಮಾರಾಟ ಜಾಲ ದಿನೇ ದಿನೇ ಹೆಚ್ಚುತ್ತಿರುವಂತೆಯೇ ಗೋಣಿ ಚೀಲವೊಂದರಲ್ಲಿ ತುಂಬಿಸಿಡಲಾಗಿದ್ದ ದನದ ರುಂಡ ಹಾಗು ಚರ್ಮಗಳು ಗಂಗೊಳ್ಳಿ ಕಳುವಿನ ಬಾಗಿಲು ಎಂಬಲ್ಲಿ ಜು 18 ರ ಗುರುವಾರ ಪತ್ತೆಯಾಗಿದೆ.
ಗುರುವಾರ ಬೆಳಿಗ್ಗೆ ಮೀನುಗಾರಿಕೆಗೆಂದು ದೋಣಿಯಲ್ಲಿ ತೆರಳುತ್ತಿದ್ದ ಸಂದರ್ಭ ಕಳುವಿನ ಬಾಗಿಲು ಎಂಬ ಪ್ರದೇಶದ ಹೊಳೆಯಲ್ಲಿ ಚೀಲವೊಂದು ತೇಲಿ ಬರುತ್ತಿರುವುದು ಕಂಡು ಬಂದಿದೆ. ತಕ್ಷಣ ಚೀಲದಲ್ಲಿ ಏನಿದೆ ಎನ್ನುವ ಕುತೂಹಲದಲ್ಲಿ ಮೀನುಗಾರ ಕಾರ್ಮಿಕರು ಬಿಚ್ಚಿ ನೋಡಿದಾಗ ದನದ ರುಂಡ ಮತ್ತು ತ್ಯಾಜ್ಯಗಳು ಪತ್ತೆಯಾಗಿವೆ. ಸುಮಾರು ಮೂರು ದಿನಗಳ ಹಿಂದೆ ಕಡಿದಿರಬಹುದಾದ ದನದ ರುಂಡ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಮಾಂಸ ಮಾಡಿ ತ್ಯಾಜ್ಯವನ್ನು ಚೀಲದಲ್ಲಿ ತುಂಬಿ ಹೊಳೆಗೆಸೆದಿರಬಹುದು ಎಂದು ಅಂದಾಜಿಸಲಾಗಿದೆ.
ಗಂಗೊಳ್ಳಿ ಪೊಲೀಸರಿಗೆ ಸ್ಥಳೀಯರು ಸುದ್ಧಿ ಮುಟ್ಟಿಸಿದ ಬಳಿಕ ಸ್ಥಳಕ್ಕೆ ಬಂದ ಪೊಲಿಸರು ಮಹಜರು ನಡೆಸಿದ ಬಳಿಕ ಗುಂಡಿಯಲ್ಲಿ ಮುಚ್ಚಿ ವಿಲೇವಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.