ಮೂಡುಬಿದಿರೆ, ಡಿ 14 : ಗ್ರಾಹಕರೊಬ್ಬರು ಬುಕ್ ಮಾಡಿದ್ದು ಹೊಸ ಪ್ರಿಂಟರ್. ಆದ್ರೆ ಬಂದು ತಲುಪಿದ್ದು ಮಾತ್ರ ಹಳೆಯ, ಗುಜರಿಗೆ ಹಾಕುವಂತಹ ಪ್ರಿಂಟರ್. ಗ್ರಾಹಕರಿಗೆ ಪಂಗನಾಮ ಹಾಕಿರುವ ಘಟನೆ ನಡೆದಿರುವುದು ಮೂಡುಬಿದಿರೆಯಲ್ಲಿ.
ಮೂಡುಬಿದಿರೆಯ ಚೇತನ್ ಎಂಬವರು ಡಿ 9 ರ ಶನಿವಾರ ಸಂಜೆ ಬೃಹತ್ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ನಲ್ಲಿ ಆನ್ಲೈನ್ನಲ್ಲಿ 7,699 ಮೌಲ್ಯದ ಪ್ರಿಂಟರ್ ಒಂದನ್ನು ಬುಕ್ ಮಾಡಿದ್ದರು. ನಾಲ್ಕು ದಿನಗಳ ನಂತರ ಅಂದರೆ ,ಡಿ 13 ರ ಬುಧವಾರ ಬೆಳಗ್ಗೆ ಅವರಿಗೆ ಡೆಲಿವರು ಏಜೆನ್ಸಿ ಮೂಲಕ ಪ್ರಿಂಟರ್ ಬಾಕ್ಸ್ ತಲುಪಿದೆ. ಆದರೆ ಅದನ್ನು ತೆರೆದು ನೋಡುವಾಗ, ಹಳೆಯ ಎಚ್ಪಿ ಪ್ರಿಂಟರ್ ಇರುವುದು ಗಮನಕ್ಕೆ ಬಂದಿದೆ. ಮೋಸಕೊಳಗಾದ ಗ್ರಾಹಕರು ಕಂಪೆನಿಗೆ ಮತ್ತು ಏಜೆನ್ಸಿಗೆ ಹಾಗೂ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಇವರಿಗೆ ನ್ಯಾಯ ಸಿಗುತ್ತೇ ಇಲ್ಲವೋ ಅನ್ನೋದನ್ನ ಮಾತ್ರ ಕಾದು ನೋಡಬೇಕು