ಕಾಸರಗೋಡು ಡಿ 14: ಕಾಸರಗೋಡು: ಚಿಮೇನಿ ಪುಲಿಯನ್ನೂರಿನಲ್ಲಿ ತಂಡವೊಂದು ದಂಪತಿಯ ಕತ್ತು ಕೊಯ್ದು ಚಿನ್ನಾಭರಣ , ನಗದು ದರೋಡೆ ನಡೆಸಿದ ಘಟನೆ ಡಿ 13 ಬುಧವಾರ ತಡರಾತ್ರಿ ನಡೆದಿದ್ದು, ಗೃಹಿಣಿ ಕೊಲೆಗೀಡಾಗಿದ್ದು , ಗಂಭೀರ ಗಾಯಗೊಂಡ ಪತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೀಡಾದವ ರ ನ್ನು ನಿವೃತ್ತ ಶಿಕ್ಷಕಿ ಪಿ . ವಿ ಜಾನಕಿಯಮ್ಮ ( 66) ಎಂದು ಗುರುತಿಸಲಾಗಿದೆ. ಪತಿ ನಿವೃತ್ತ ಶಿಕ್ಷಕ ಕೃಷ್ಣ ನ್ ರ ಗಂಭೀರ ಗಾಯಗೊಂಡಿದ್ದಾರೆ . ಮುಸುಕುಧಾರಿಗಳಾಗಿ ಮನೆಗೆ ನುಗ್ಗಿದ್ದ ಮೂವರ ತಂಡ ಈ ಕೃತ್ಯ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಾತ್ರಿ ಮನೆಗೆ ತಲಪಿದ ತಂಡವು ಕಾಲಿಂಗ್ ಬೆಲ್ ಹಾಕಿದ್ದು , ಕೂಡಲೇ ಮೂವರು ಮನೆಗೆ ನುಗ್ಗಿದ್ದಾರೆ . ಕೃಷ್ಣನ್ ರನ್ನು ಹಿಡಿದು ಬಾಯಿಗೆ ಪ್ಲಾಸ್ಟರ್ ಲಗತ್ತಿಸಿದ್ದು , ಮನೆಯೊಳಗಿದ್ದ ಜಾನಕಿಯಮ್ಮ ಬೊಬ್ಬೆ ಹಾಕಿದಾಗ ತಂಡವು ಇವರಿಗೂ ಹಲ್ಲೆ ಮಾಡಿ ಪ್ಲಾಸ್ಟರ್ ಲಗತ್ತಿಸಿ ಕೋಣೆಗೆಗೆ ಎಳೆದೊಯ್ದು ಕತ್ತು ಕೊಯ್ದು ಬಳಿಕ ಮನೆಯಲ್ಲಿದ್ದ 50 ಸಾವಿರ ರೂ . ನಗದು , ಜಾನಕಿಯಮ್ಮರ ದೇಹದಲ್ಲಿ ಧರಿಸಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ವನ್ನು ದೋಚಿ ಪರಾರಿಯಾಗಿದ್ದಾರೆ. ಕೃಷ್ಣನ್ ಪ್ರಜ್ಞೆ ಕಳೆದುಕೊಂಡಿದ್ದು , ಎರಡು ಗಂಟೆ ಕಳೆದು ಪ್ರಜ್ಞೆ ಮರಳಿತ್ತು. ಬಳಿಕ ಕೃಷ್ಣನ್ ಬೊಬ್ಬೆ ಹಾಕಿದಾಗ ಧಾವಿಸಿ ಬಂದ ಸ್ಥಳೀಯರು ಧಾವಿಸಿದ್ದಾರೆ.
ಕೃಷ್ಣನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಜಾನಕಿಯಮ್ಮ ಕತ್ತು ಕೊಯ್ದು ಕೊಲೆಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದರು . ದರೋಡೆಕೋರರು ಮಲಯಾಳ ಮಿಶ್ರಿತ ಹಿಂದಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಕೃಷ್ಣ ನ್ ರವರ ನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಕುತ್ತಿಗೆಯ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.ಜಾನಕಿಯಮ್ಮರ ಮೃತದೇಹ ಪರಿಯಾರಂ ವೈದ್ಯಕೀಯ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ .
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ . ಜಿ ಸಿಮೋನ್, ಡಿ ವೈ ಎಸ್ ಪಿ ಕೆ . ದಾಮೋದರನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ .
ಬೆರಳಚ್ಚು ತಜ್ಞರು , ಶ್ವಾನ ದಳ ಮಾಹಿತಿ ಕಲೆಹಾಕುತ್ತಿದೆ. ಕೊಲೆಗೀಡಾದ ಜಾನಕಿಯಮ್ಮ ಪುಲಿಯನ್ನೂರು ಯು .ಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾರಾಗಿದ್ದು, ಕೃಷ್ಣನ್ ಪೊತಾ ವೂರು ಎಲ್ .ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾರಾಗಿದ್ದಾರೆ .ದರೋಡೆಕೋರರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು , ಹಲವು ಮಾಹಿತಿಗಳನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ