ಮಂಗಳೂರು, ಜು 18 (Daijiworld News/MSP): ಶಂಕಿತ ಡೆಂಗ್ಯೂ ಜ್ವರ ಪುಟ್ಟ ಬಾಲಕನನ್ನು ಬಲಿ ಪಡೆದಿದೆ. ನಗರದ ಉರ್ವ ಸೈಂಟ್ ಅಲೋಶಿಯಸ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿ ಕ್ರಿಸ್ ಎನ್ ಸುವರ್ಣ (8) ಡೆಂಗ್ಯೂ ಗೆ ಸಾವನ್ನಪ್ಪಿದ್ದಾರೆ.
ಕ್ರಿಸ್.ಎನ್ ಸುವರ್ಣ ಇವರಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಜು.16 ರ ಮಂಗಳವಾರ ಮಧ್ಯಾಹ್ನ ಬಾಲಕ ಮೃತಪಟ್ಟಿದ್ದಾನೆ. ಬಾಲಕ ಸಾವಿಗೆ ಡೆಂಗ್ಯೂ ಕಾರಣ ಎಂಬ ಮಾತು ಕೇಳಿ ಬಂದಿದೆ. ಆದರೆ ಆರೋಗ್ಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಹೃದಯದ ಮಾಂಸ ಖಂಡಗಳಲ್ಲಿ ವೈರಾಣು ಸೋಂಕು ಬಾಧಿಸಿ ಸಾವು ಸಂಭವಿಸಿದೆ. ಶಂಕಿತ ಡೆಂಗ್ಯೂ ಕಾರಣವಲ್ಲ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್ ಕುಮಾರ್ ಅವರು ಕೂಡಾ ಸ್ಪಷ್ಟಪಡಿಸಿದ್ದಾರೆ. ಮೃತ ಬಾಲಕನ ಅಂತ್ಯಕ್ರಿಯೆ ಬುಧವಾರ ನೆರವೇರಿದೆ.