ಆರ್.ಬಿ.ಜಗದೀಶ್
ಕಾರ್ಕಳ, ಡಿ 13 : ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ಲೀಲಾ ಶೆಟ್ಟಿ(63) ಬದುಕುದ್ದಕ್ಕೂ ನಾನಾ ರೀತಿಯ ಕಷ್ಟಗಳನ್ನು ಜೀವನದಲ್ಲಿ ಎದುರಿತ್ತಾ ಬಂದಿದ್ದಾರೆ.ತುಳುನಾಡ ಸಂಸ್ಕೃತಿ, ಸಂಸ್ಕಾರ, ಕಲೆ, ಆಚಾರ-ವಿಚಾರ ಇದರ ಬಗ್ಗೆ ಆಳವಾದ ನಂಬಿಕೆ ಅವರ ಪಾಲಿಗೆ ಶ್ರೀರಕ್ಷೆಯಾಗಿದೆ. ಹೀಗಾಗಿ ಜಾನಪದದ ವಿವಿಧ ಕಲಾಪ್ರಕಾರದ ಸಾಧಕರು 2017-18 ನೇ ಸಾಲಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಇವರ ಪಾಲಿಗೆ ಒದಗಿ ಬಂದಿದೆ. ಮಾಳ ಹುಕ್ರಟ್ಟೆ ವರ್ಚಾರ್ನ ಅಣ್ಣಪ್ಪ ಶೆಟ್ಟಿ ಹಾಗೂ ಲಿಂಗಮ್ಮ ಶೆಟ್ಟಿ ಮತ್ತು ದಂಪತಿಗಳ ಐವರು ಮಕ್ಕಳಲ್ಲಿ ಲೀಲಾ ಶೆಟ್ಟಿ ಓರ್ವರು. ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಹೆತ್ತವರೊಂದಿಗೆ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ಬಡಕುಟುಂಬದಲ್ಲಿ ಹುಟ್ಟಿ ಬೆಳೆಯುತ್ತಿದ್ದಂತೆ ವಿಧಿಲೀಲೆ ಎಂಬಂತೆ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿತ್ತು. ಈ ವೇದನೆಯನ್ನು ಅರಗಿಸಿಕೊಳ್ಳಲಾಗದ ಹೆತ್ತವರು ಜೋತಿಷ್ಯ, ದರ್ಶನ ಪಾತ್ರಿ ಕಡೆಗೆ ಮುಖ ಮಾಡಿದರು. ಸಂಬಂಧಿ ಸಿರಿದರ್ಶನ ಪಾತ್ರಿ ಪದ್ದು ಶೆಟ್ಟಿಯವರ ಮನೆಗೆ ಲೀಲಾ ಅವರನ್ನು ಅವರ ಮೇಲೆ ಅಬ್ಬಗ ದೇವರು ಅವತರಿಸಿದರಂತೆ. ಸಹೋದರಿ ಲಲಿತಾ ಅವರ ಮೇಲೆ ದಾರಗ ಅವತರಿಸಿದ ಹಳೆ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಾರೆ. ಅಂದಿನಿಂದ ಹಿಂದಿನ ವರೆಗೆ ಸಹೋದರಿಯರ ಮೇಲೆ ಅಬ್ಬಗ-ದಾರಗ ದರ್ಶನ ಬರುತ್ತಿದೆ. ಹಳೆಯಂಗಡಿ ಖಂಡಿಗೆ ಅವರ ಅಲಡೆಯಾಗಿದೆ.
ಹಾಡುಗಾರಿಕೆಯಲ್ಲಿ ಹೆಚ್ಚಿನ ಒಲವು
ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪಾಠದ ಗಮನಕ್ಕೆ ಹೆಚ್ಚಿನ ಆಸಕ್ತಿ ನೀಡಿದೇ ಇದ್ದ ಲೀಲಾ ಶೆಟ್ಟಿ ಜಾನಪದ ಕಾಡುಗಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು.
ಬಾಲ್ಯದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಾಗ ನೇಜಿ ಹಾಡುಗಳು, ಕಬಿತ, ಸಂಧಿ ಹಾಡುಗಳು, ಪಾಡ್ದನಗಳನ್ನು ಹಾಗೂ ಹೊಲ-ಗದ್ದೆಗಳಲ್ಲಿ ಹಾಡುಗಳನ್ನು ವನಜ ಪೂಜಾರ್ತಿಯೊಂದಿಗೆ ಕೆಲಸ ಮಾಡುತ್ತ ಹಾಡುಗಳನ್ನು ಕರಗತ ಮಾಡಿಕೊಂಡರು
ಮುರಿದುಬಿದ್ದ ದಾಂಪತ್ಯ ಜೀವನ
ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಲೀಲಾ ಶೆಟ್ಟಿ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ನೆಲ್ಲಿಕಾರಿನಲ್ಲಿ ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದುದ್ದು ಕೇವಲ ಒಂದುವರೆ ವರ್ಷ ಮಾತ್ರ. ನಂತರದ ದಿನಗಳಲ್ಲಿ ಒಂಟಿಯಾಗಿ ಬೆಳೆದಿರುವುದು ಜೈನ ಮನೆತನದ ಆಶ್ರಯದಲ್ಲಿ. ಮನೆ ಕೆಲಸ ಮಾಡುತ್ತಿದ್ದ ಅವರು ಹಲವು ವರ್ಷದ ಬಳಿಕ ಸರಕಾರದ ದೊರೆತ ನಿವೇಶನದಲ್ಲಿ ಮನೆ ನಿರ್ಮಿಸಿ ಬೀಡಿ ಕಟ್ಟಿ ಜೀವನ ಸಾಗುತ್ತಿದ್ದರು.
ಪ್ರಸ್ತುತ ಪಡಿತರ ಚೀಟಿ,ಆದಾರ್ ಕಾರ್ಡ್ ಎಲ್ಲವೂ ನೆಲ್ಲಿಕಾರು ವಿಳಾಸದಲ್ಲಿ ಇದೆ. ಕಳೆದ ಎರಡು ವರ್ಷದ ಹಿಂದೆ ಮಾಳದ ಹುಟ್ಟೂರಿನ ಮನೆ ಸಮೀಪದ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಆ ಮನೆಯನ್ನು ವ್ಯಕ್ತಿಯೊಬ್ಬರು ಮಾನವೀಯ ನೆಲೆಯಲ್ಲಿ ನೀಡಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲ. ಮನೆಗೆ ಬಾಗಿಲು ಇಲ್ಲ. ಮಣ್ಣಿನ ಗೋಡೆ ಹೊಂದಿರುವ ಅತಂತ್ರ ಸ್ಥಿತಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಏಕಾಂಗಿಯಾಗಿ ಇರುವ ಲೀಲಾ ಶೆಟ್ಟಿ ಬದುಕು ನಿರ್ವಹಣೆಗಾಗಿ ಬೀಡಿ ಕಟ್ಟುತ್ತಿದ್ದಾರೆ. ಅದರಿಂದ ಸುಮಾರು ರೂ.೭೫ನ್ನು ಪ್ರತಿದಿನ ಸಂಪಾದಿಸುತ್ತಿದ್ದಾರೆ.
ತನ್ನ ಬದುಕು ನಿತ್ಯ ಕತ್ತಲೆಯಲ್ಲಿದ್ದರೂ ದೇವರ ಮೇಲಿನ ನಂಬಿಕೆ ಅಪಾರವಾಗಿದೆ. ಪ್ರತಿನಿತ್ಯ ದೇವರ ದೀಪ ಬೆಳಗಿಸುತ್ತಾರೆ. ಗಂಟೆ, ಜಾಗಟೆ,ತಾಳ ಇವೆಲ್ಲವೂ ದೇವರ ಸಮ್ಮಖದಲ್ಲಿ ಕಂಡುಬರುತ್ತದೆ.
ಪಾಡ್ದನ ಪ್ರಶಸ್ತಿ-2016
ಉಡುಪಿ ತಿಂಗಳೆ ಪ್ರತಿಷ್ಠಾನದಿಂದ ಪಾಡ್ದನ ಪ್ರಶಸ್ತಿ 2016 ರಲ್ಲಿ ಪಡೆದವರಾಗಿದ್ದಾರೆ. ಇವರ ಜ್ಞಾನ ಭಂಡಾರದಲ್ಲಿ ಹಲವಾರು ಕಾವ್ಯಗಳು, ಪಾಡ್ದನಗಳು (ಮಾನಸಿಕ ಪಠ್ಯಗಳು) ಇರುವುದನ್ನು ಗಮನಿಸಿ ಜಾನಪದ ರಂಗಕಲೆಗಳ ಅಧ್ಯಯ ಕೇಂದ್ರ-ಮಣಿಪಾಲ ವಿಶ್ವ ವಿದ್ಯಾಲಯ ಸುಮಾರು 30 ಘಂಟೆಗೂ ಮೀರಿದ ಹಾಡುಗಳನ್ನು ಮತ್ತು ಸಂದರ್ಶನ ಮಾಹಿತಿಗಳನ್ನು ಬಹುಮಾಧ್ಯಮದಲ್ಲಿ ದಾಖಲೆ ನಡೆಸಿದೆ.
ಭೂತಾರಾಧನೆಗೆ ಸಂಬಂಧಿಸಿದಂತೆ ಆಯಾಯಾ ದೈವದ ಪಾತ್ರಗಳ ಹುಟ್ಟು-ಬೆಳವಣಿಗೆಯ ಕಥೆಯನ್ನು ಹಾಡುವುದೆಂದರೆ ಇವರಿಗೆ ಎಲ್ಲಿಲ್ಲದ ಸಂತಸ. ನೇಜಿ-ಹಾಡುಗಳು, ಕಬಿತ, ಹಾಗೂ ಪಾಡ್ದನ ಸ್ವರೂಪದ ಪ್ರಕಾರಗಳಲ್ಲಿ ಮುಖ್ಯವಾಗಿ ’ಕಲ್ಕುಡ-ಕಲ್ಲುರ್ಟ್ಟಿ’, ’ಪಂಜುರ್ಲಿ’, ’ಕೋಟಿ-ಚೆನ್ನಯ್ಯ’ ಸಿರಿ ಕಾವ್ಯ, ಅಬ್ಬಗ ಕಾವ್ಯ, ಬಾಲೆರಕ್ಕ ಕುಮತಿ’, ಬಾಲೆಗ ದೇವನಡಿಗ ಪಾಡ್ದನ, ಕೇಂಜವ ಪಕ್ಕಿ ಪಡ್ದನ ಇದಲ್ಲದೆ ಓಬೇಲೆ, ಕಬಿತ, ಹೊಯ್ಯ, ಮುಂತದ ತುಳು ಸಾಹಿತ್ಯ ಪ್ರಕಾರಗವೆ. ಅನೇಕ ಎದಿರು ಕಥೆಗಳು (ಜನಪದ ಕಥೆಗಳು) ಇವರು ತಿಳಿದುಕೊಂಡಿದ್ದು ಹಾಡುಗಳಲ್ಲಿ ಮುಖ್ಯವಾಗಿ ಹೇಳಬಲ್ಲರು.
ಪಾಡ್ದನಗಳ ಭಂಡರ ಎನಿಸಿಕೊಂಡಿರುವ ಶ್ರೀಮತಿ ಲೀಲಾ ಶೆಟ್ಟಿ ಹಾಡುಗಬ್ಬಗಳು, ಕಾವ್ಯಗಳು ಇಂದಿಗೂ ಅಮೂಲ್ಯವಾಗಿವೆ. ಇವರ ಪಾಡ್ದನ ಹಾಡುಗಾರಿಕೆ ಸಂಪನ್ಮೂಲಗಳನ್ನು ಜಾನಪದ ಅಕಾಡೆಮಿ ದಾಖಲುಮಾಡಿಕೊಳ್ಳುವಂತೆ ಹಾಗೂ ಪ್ರಸ್ತುತ ಸಾಲಿನ ಪ್ರಶಸ್ತಿಯನ್ನು ಕೊಡುವಂತಾಗಲಿ.
- ಡಾ. ವೈ. ಎನ್. ಶೆಟ್ಟಿ
(ಜಾನಪದ ವಿದ್ವಾಂಸರು. ಚಿಂತಕರು)
ಎಲ್ಲ ರೀತಿಯಲ್ಲಿ ನೆರವು ನೀಡಲು ಕಟ್ಟಿಬದ್ಧ
-ರವೀಂದ್ರ ಶೆಟ್ಟಿ,ಸಂಘಟಕರು ಆಟಿಗೊಂಜಿ ಬಂಟಕೂಟ
ಆರ್ಹ ವ್ಯಕ್ತಿಯನ್ನು ಗುರುತಿಸಿದಕ್ಕಾಗಿ ಅಭಿನಂದನೀಯವಾಗಿದೆ. ಲೀಲಾ ಶೆಟ್ಟಿ ಅವರ ನೋವಿಗೆ ಮುಂದಿನ ದಿನಗಳಲ್ಲಿ ಸ್ವಂದಿಸಲು ಕಟ್ಟಿಬದ್ಧನಾಗಿದ್ದೇನೆ. ಅವರ ಕುಟುಂಬಸ್ಥರನ್ನು ಹೀಗಾಗಲೇ ಸಂಪರ್ಕಿಸಿದ್ದೇನೆ.