ಕಾಸರಗೋಡು, ಜು 16 (Daijiworld News/MSP): ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಫಲಗೊಂಡಿದೆ ಎಂದು ಆರೋಪಿಸಿ ಜು. 16 ರಂದು ಮುಸ್ಲಿಂ ಲೀಗ್ ನಡೆಸಿದ ಜಾಥಾ ಹಿಂಸಾಚಾರಕ್ಕೆ ತಿರುಗಿದೆ.
ಸಾಂದರ್ಭಿಕ ಚಿತ್ರ
ಜಾಥಾ ಆಯೋಜಿಸಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತರು ಪೊಲೀಸರ ತಡೆಯನ್ನು ಬೇಧಿಸಿ ಎಸ್ .ಪಿ ಕಚೇರಿಗೆ ಬಲವಂತವಾಗಿ ನುಗ್ಗಲೆತ್ನಿಸಿದಾಗ ಪೊಲೀಸರಿಂದ ಲಾಠಿ ಪ್ರಹಾರ, ಜಲಫಿರಂಗಿ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮುಸ್ಲಿಂ ಲೀಗ್ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.