ಬಂಟ್ವಾಳ, ಡಿ 13: ಅಪರಿಚಿತ ಯುವಕನೋರ್ವನ ಮೃತದೇಹ ರೈಲ್ವೆ ಹಳಿಯಲ್ಲಿ ಡಿ 12 ರ ಮಂಗಳವಾರ ತಡರಾತ್ರಿ ಇಲ್ಲಿನ ರೈಲ್ವೇನಿಲ್ದಾಣದಲ್ಲಿ ಪತ್ತೆಯಾಗಿದೆ. ಬಿ.ಸಿ ರೋಡ್ ನ ರೈಲು ನಿಲ್ದಾಣದ ಸಮೀಪದಲ್ಲಿ ಸುಮಾರು 25 ವರ್ಷ ಪ್ರಾಯದ ಯವಕನೋರ್ವ ರಾತ್ರಿ ವೇಳೆಯಲ್ಲಿ ಗೂಡ್ಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿರಬೇಕು ಎಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ನೋಡಿ ರೈಲ್ವೆ ಇಲಾಖೆ ಗೆ ಮಾಹಿತಿ ನೀಡಿದ್ದು ಮಂಗಳೂರು ವಿಭಾಗದ ರೈಲ್ವೆ ಪೊಲೀಸ್ ಇನ್ಸ್ ಪೆಕ್ಟರ್ ಜಯಾನಂದ ಕೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು. ಯುವಕನ ಜೇಬಿನಲ್ಲಿ ವಿಸಿಟಿಂಗ್ ಕಾರ್ಡ್ ದೊರೆತಿದ್ದು ಅದರಲ್ಲಿ ಕಾರ್ಕಳ ಎಡಪದವು ಇಲ್ಲಿನ ಕೆಲವು ವಿಸಿಟಿಂಗ್ ಕಾರ್ಡ್ ದೊರೆತಿದ್ದು ಅ ಪರಿಸರದ ಯುವಕನಾಗಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ