ಮಂಗಳೂರು, ಜು 14 (Daijiworld News/SM): ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬೆದರಿಸಿದ ದರೋಡೆಕೊರರು ಖಾಸಗಿ ಫೈನಾನ್ಸರ್ ಒಬ್ಬರಿಂದ ಸುಮಾರು 2 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಬಜ್ಪೆ ಸಮೀಪದ ಮಳಲಿ ಎಂಬಲ್ಲಿ ನಡೆದಿದೆ.
ನಾಗುರಿ ನಿವಾಸಿ ಸೆಂಥಿಲ್ ಕುಮಾರ್ ದರೋಡೆಗೊಳಗಾದ ವ್ಯಕ್ತಿ. ಇವರು ಫೈನಾನ್ಸ್ ಹಣ ಸಂಗ್ರಹಕ್ಕೆ ತೆರಳಿದ್ದರು. ಈ ವೇಳೆ ದರೋಡೆಕೋರರ ತಂಡ ಕೃತ್ಯ ನಡೆಸಿದೆ. ಸೆಂಥಿಲ್ ಅವರಲ್ಲಿದ್ದ ಸುಮಾರು 2 ಲಕ್ಷ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.