ಕಾಪು, ಜು 13 (Daijiworld News/MSP): ಅಪರ ಸಂಸ್ಕಾರಕ್ಕಾಗಿ ಕಾಗೆ ಕಳುಹಿಸಿಕೊಡುವ ಉದ್ದೇಶದಿಂದ ಕಾಗೆ ಸಾಕಿದ್ದ ಪ್ರಶಾಂಶ್ ಅವರ ಯೋಚನೆಯನ್ನು ಅರಣ್ಯ ಇಲಾಖೆಯವರು ಮೊಟಕುಗೊಳಿಸಿದ್ದಾರೆ. ಸುದ್ದಿ ತಿಳಿದ ಉಡುಪಿ ವಲಯ ಅರಣ್ಯಾಧಿಕಾರಿ ಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಪ್ರಶಾಂತ್ ಮನೆಗೆ ತೆರಳಿ ಕಾಗೆಯನ್ನು ವಶಕ್ಕೆ ಪಡೆದ ಘಟನೆ ಜು.13 ರ ಶನಿವಾರ ನಡೆದಿದೆ.
ವೃತ್ತಿಯಲ್ಲಿ ಟೈಲರ್ ಆಗಿರುವ ಪ್ರಶಾಂತ್ ಮೂರು ತಿಂಗಳ ಹಿಂದೆ ಮನೆ ಸಮೀಪದ ತೆಂಗಿನ ಮರದಿಂದ ಮೂರು ಕಾಗೆ ಮರಿಗಳು ಕೆಳಗೆ ಬಿದ್ದಿದ್ದವು. ಪಕ್ಷಿ ಪ್ರಿಯ ಪ್ರಶಾಂತ್ ಕಾಗೆಮರಿಗಳನ್ನು ಜೋಪಾನವಾಗಿ ತನ್ನ ಮನೆಗೆ ತಂದು ಸಾಕಿದ್ದಾರೆ. ತಲೆಗೆ ಏಟಾಗಿದ್ದ ಎರಡು ಮರಿಗಳು ಸತ್ತು ಉಳಿದ ಒಂದನ್ನು ಆರೈಕೆ ಮಾಡಲು ಪ್ರಾರಂಭಿಸಿದರು ಮರಿ ಚೇತರಿಸಿ ಕೊಂಡಿತು. ಹಾರಾಡಲು ಆಗದ ಕಾಗೆಮರಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸಲು ಗೂಡಿನೊಳಗೆ ಹಾಕಿ ಮನೆಮದ್ದು ಮಾಡಿ ಆಹಾರ ಕೊಟ್ಟು ಸಾಕತೊಡಗಿದರು. ಹಿಂದು ಸಂಪ್ರದಾಯದಲ್ಲಿ ವಾಯಸ ಭೋಜನಕ್ಕೆ ಕಾಗೆಯ ಅವಶ್ಯಕತೆ ಇದೆ.ಇತ್ತೀಚಿನ ದಿನಗಳಲ್ಲಿ ಕಾಗೆ ಸಂತಾನ ಕ್ಷೀಣಿಸುತಿದ್ದ ಪರಿಣಾಮ ಸೇವೆಯ ಮಾಡುವ ಉದ್ದೇಶದಿಂದ ಉತ್ತರ ಕ್ರಿಯೆಗೆ ಕಾಗೆ ಬೇಕಾದಲ್ಲಿ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ತುಂಬಾ ಜನರಿಂದ ಮೆಚ್ಚುಗೆ ವ್ಯಕ್ತವಾಗುತಿದ್ದಂತೆ ಇವರಿಗೆ ಕೆಲವರಿಂದ ವಿರೋದವು ವ್ಯಕ್ತವಾಯಿತು .
ಶನಿವಾರ ಉಡುಪಿ ವಲಯ ಅರಣ್ಯಾಧಿಕಾರಿ ಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಪ್ರಶಾಂತ್ ಮನೆಗೆ ತೆರಳಿ ಕಾಗೆಯನ್ನು ವಶಕ್ಕೆ ಪಡೆದು ಸಮಿಪದ ಕಾಡಿನಲ್ಲಿ ಬಿಟ್ಟದ್ದಾರೆ ಎನ್ನಲಾಗಿದೆ.