ಮಂಗಳೂರು, ಜು 13 (Daijiworld News/MSP): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬದಲಾಗುವ ಹವಾಮಾನ ಹಾಗೂ ಬಿಸಿಲು -ಮಳೆಯ ವಾತಾವರಣದಿಂದ ಜನರು ಹಲವಾರು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಹಾವಳಿ ಉಲ್ಬಣಗೊಂಡಿದ್ದು ಕಳೆದೆರಡು ವಾರಗಳಿಂದ ಡೆಂಗ್ಯೂ ಪೀಡಿತರ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಜು.1ರಿಂದ 12ರ ವರೆಗೆ 124 ಮಂದಿಯಲ್ಲಿ ಡೆಂಗ್ಯೂ ಜ್ವರ ದೃಢಪಟ್ಟಿದೆ.
ಜ್ವರ ಪೀಡಿತರಲ್ಲಿ 30 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 400 ಮಂದಿಯಲ್ಲಿ ಡೆಂಗ್ಯೂ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಈ ಪೈಕಿ 124 ಜನರಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
ಈ ನಡುವೆ ಮಲೇರಿಯಾ, ಡೆಂಗ್ಯೂ, ಹೆಚ್ಚುತ್ತಿರುವ ಪ್ರದೇಶಗಳಿಗೆ ನಗರ ಪಾಲಿಕೆಯಿಂದ ನಿರಂತರ ಸಮೀಕ್ಷೆ ಮತ್ತು ಸೊಳ್ಳೆಗಳ ಉತ್ಪತ್ತಿ ಪ್ರದೇಶಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ ಸಿಇಒ ಡಾ ಸೆಲ್ವಮಣಿ ಮಂಗಳೂರು ಪಾಲಿಕೆಗೆ ನಿರ್ದೇಶನ ನೀಡಿದ್ದಾರೆ.