ಮಂಗಳೂರು, ಜು12(Daijiworld News/SS): ಹಣವನ್ನು ಪಣಕ್ಕಿಟ್ಟು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ತಲಪಾಡಿ ಸಮೀಪ ಬಂಧಿಸಿದ್ದಾರೆ.
ಬಂಧಿತರನ್ನು ವಿಟ್ಲ ಕನ್ಯಾನ ನಿವಾಸಿ ಸಂತೋಷ್ ಶೆಟ್ಟಿ (40) ಮತ್ತು ಜೀವನ್ (22) ಎಂದು ಗುರುತಿಸಲಾಗಿದೆ.
ಸಂತೋಷ್ ಮಂಗಳೂರಿನ ಬೆಂದೂರ್'ವೆಲ್ ಸಮೀಪವಿರುವ ಸ್ಕಂದ ಬೇಕರಿಯ ಮಾಲೀಕರಾಗಿದ್ದಾರೆ. ಬಂಧಿತರಿಂದ ಮೊಬೈಲ್ ಆಪ್, ಕಂಪ್ಯೂಟರ್, ಕ್ರೇಟಾ ಕಾರು ಸೇರಿದಂತೆ ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಸಂತೋಷ್ ಶೆಟ್ಟಿ ಲೊಕ್ಯಾಂಟೋ ಆ್ಯಾಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತಲಪಾಡಿಯ ಮನೆಯೊಂದರಿಂದ ಇಬ್ಬರನ್ನು ಬಂಧಿಸಿದ್ದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.