ಕುಂದಾಪುರ, ಜು 11 (Daijiworld News/MSP): ಕುಂದಾಪುರ ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗುವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದು ಘಟನೆಯ ತನಿಖೆ ಚುರುಕುಗೊಂಡಿದೆ.
ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಕುಮ್ಟಿಬೇರು ಸಂತೋಷ್ ನಾಯ್ಕನ ಮನೆಗೆ ಭೇಟಿ ಕೊಟ್ಟು ತೀವ್ರವಾಗಿ ತನಿಖೆ ಆರಂಭಿಸಿದ್ದಾರೆ. ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿದ್ದ ನಿಶಾ, ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಸಂತೋಷ್ ನಾಯ್ಕ್ ಅವರ ಮನೆಯ ಕೋಣೆಯ ಒಳಗೆ ಇದೀಗ ಪ್ರತಿಯಿಬ್ಬರನ್ನೂ ವೈಯುಕ್ತಿವಾಗಿ ತನಿಖೆಗೆ ಒಳಪಡಿಸಲಾಗುತ್ತಿದೆ.
ಮೊದಲಿಗೆ ಶ್ವಾನದಳ ಆಗಮಿಸಿದ್ದು ಪ್ರಕರಣದ ಬಗ್ಗೆ ತನಿಖೆ ನಡೆದಿತ್ತು. ಆದರೆ ಯಾವುದೇ ಸ್ಪಷ್ಟವಾದ ಮಾಹಿತಿ ಲಭಿಸಿಲ್ಲ. ಕುಮ್ಟಿಬೇರಿಗೆ ನಾಲ್ಕು ಮಾರ್ಗಗಳಿದ್ದು, ಎಲ್ಲಾ ಕಡೆಯು ಇರುವ ಸಿಸಿಟಿವಿ ಕೆಮೆರಾಗಳನ್ನೂ ವೀಕ್ಷಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ಡಿಸಿಐಬಿ ಅಧಿಕಾರಿಗಳ ತಂಡ ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದೂ ನಿಶಾ ಜೇಮ್ಸ್ ಪತ್ರಕರ್ತರಿಗೆ ಹೇಳಿದ್ದಾರೆ.