ಮಂಗಳೂರು, ಜು 07 (DaijiworldNews/SM): ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ನೀರಿಗಿಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಸಸಿಹಿತ್ಲು ಬೀಚ್ ನಲ್ಲಿ ನಡೆದಿದೆ. ಸಮುದ್ರಪಾಲಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ನಾಲ್ಕು ಮಂದಿ ಸ್ನೇಹಿತರು ಜುಲೈ 7ರ ರವಿವಾರದಂದು ಸಸಿಹಿತ್ಲು ಬೀಚ್ ಗೆ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭ ಯುವಕರು ಸಮುದ್ರದ ನೀರಿಗೆ ಇಳಿದಿದ್ದಾರೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ನಾಲ್ವರ ಪೈಕಿ ಇಬ್ಬರು ಸಮುದ್ರಪಾಲಾಗಿದ್ದಾರೆ. ಇಬ್ಬರು ಪಾರಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.