ಉಡುಪಿ, ಜು 07 (DaijiworldNews/SM): ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹಳೆ ಸಿಂಡಿಕೇಟ್ ವೃತ್ತದಲ್ಲಿ ರಸ್ತೆಯ ನಡುವೆ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿದ್ದ ವಿದ್ಯುತ್ ಕಂಬವೊಂದನ್ನು ತೆರವುಗೊಳಿಸಲಾಗಿದೆ. ಈ ವಿದ್ಯುತ್ ಕಂಬವು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ವೇಳೆ ನಡುರಸ್ತೆಯಲ್ಲೇ ಉಳಿದುಕೊಂಡಿತ್ತು.
ಹೆದ್ದಾರಿಯ ಮಧ್ಯೆ ಇದ್ದ ವಿದ್ಯುತ್ ಕಂಬ ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡಿತ್ತು. ಮಣಿಪಾಲದಿಂದ ಉಡುಪಿ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿ ಕಾಡಿತ್ತು.
ಈ ಕುರಿತು ದಾಯ್ಜಿವರ್ಲ್ಡ್ ವಾಹಿನಿ ವರದಿಯನ್ನು ಕೂಡ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಇದೀಗ ಕಂಬವನ್ನು ತೆರವುಗೊಳಿಸಿದ್ದಾರೆ.