ಸುಳ್ಯ, ಜು06(Daijiworld News/SS): ಹೊಂಡಾ ಅಕ್ಟೀವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ಕಸಬ ಗ್ರಾಮದ ನಿವಾಸಿ ಅಶ್ರಫ್ ರಿಪವಾನ್ (23) ಎಂದು ಗುರುತಿಸಲಾಗಿದೆ.
ಸುಳ್ಯ ಪೊಲೀಸರು ಕಳವುಗೈದ ದ್ವಿಚಕ್ರವಾಹನದ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.
ಆರೋಪಿಯ ಪತ್ತೆಗೆ ಪುತ್ತೂರು ಉಪ ಅಧೀಕ್ಷಕರ ನಿರ್ದೇಶನದಂತೆ ಮತ್ತು ಸಿಪಿಐ ಮಾರ್ಗದರ್ಶನದಂತೆ ಪಿ.ಎಸ್.ಐ ಹರೀಶ್ ಎಂ.ಆರ್, ಸುಳ್ಯ ಅಪರಾಧ ವಿಭಾಗದ ಪಿ.ಎಸ್.ಐ ರತ್ನ ಕುಮಾರ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಉದಯ ಕೆ, ಪಿ.ಸಿ ಮಹೇಶ್ ಕುಮಾರ್, ಪಿ.ಸಿ ಪುನೀತ್ ಕುಮಾರ್ ಅವರ ತಂಡ ರಚಿಸಲಾಗಿತ್ತು.