ಕುಂದಾಪುರ,ಜೂ 05 (Daijiworld News/MSP): ಬಾರ್ ಮಾಲಕನ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದ ನಾಲ್ವರು ಆರೋಪಿಗಳನ್ನು ಕುಂದಾಪುರ ನ್ಯಾಯಾಲಯವು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.
2014ರಲ್ಲಿ ಕೋಣಿಯ ಪೂರ್ಣಿಮಾ ಬಾರ್ನ ಮಾಲಕರಾದ ಸುಧಾಕರ ಶೆಟ್ಟಿ ಎಂಬುವರ ಮೇಲೆ ಕೊಲೆ ಯತ್ನ ನಡೆಸಿದ್ದಾರೆ ಎಂದು ನೀಡಲಾದ ದೂರಿನಂತೆ ನಾಲ್ವರು ಆರೋಪಿಗಳಾದ ಪ್ರಶಾಂತ್ ಆಚಾರ್ಯ, ಗಣಪತಿ ಆಚಾರ್ಯ, ವಿನಯ್ ಹಾಗೂ ಪ್ರಸಾದ್ ಆಚಾರ್ಯ ಎಂಬುವರ ವಿರುದ್ಧ ಸೆಕ್ಷನ್ 307 ದಾಖಲಿಸಲಾಗಿತ್ತು. ಆರೋಪಿಗಳ ಪರವಾಗಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದು, ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನಾಲ್ಕೂ ಆರೋಪಿಗಳನ್ನು ದೋಷಮುಕ್ತಿಗೊಳಿಸಿದೆ.