ಸುರತ್ಕಲ್, ಜೂ 05 (Daijiworld News/MSP): ಇತ್ತೀಚೆಗೆ ಮುಕ್ಕ ಬೀಚ್ ನಲ್ಲಿ ಪತ್ತೆಯಾಗಿ ಆ ನಂತರ ದಡದಲ್ಲೇ ಮೃತಪಟ್ಟ ಶಾರ್ಕ್ ಹಸಿವಿನಿಂದ ದಡಕ್ಕೆ ಅಪ್ಪಳಿಸಿದಾಗ ಆದ ಗಾಯದಿಂದ ಸಾವನ್ನಪ್ಪಿದೆ ಎಂದು ಬಹಿರಂಗಗೊಂಡಿದೆ.
ನಗರದ ಮೀನುಗಾರಿಕಾ ಕಾಲೇಜಿನಲ್ಲಿ ಶಾರ್ಕ್ ನ ಕಳೇಬರ ಪರೀಕ್ಷೆ ನಡೆಸಿದ್ದ ವಿಜ್ಞಾನಿಗಳು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಶಾರ್ಕ್ ಬಹಳ ಅಪರೂಪದಾಗಿದ್ದ್ಯ್ 1.2 ಟನ್ ತೂಕವಿತ್ತು ಹಾಗೂ 5.9 ಉದ್ದವಿತ್ತು. ಸುಮಾರು 6 ವರ್ಷ ಪ್ರಾಯದ ಈ ವನ್ಯಜೀವಿ ರಕ್ಷಣಾ ಕಾಯ್ದೆ 1972 ರ ಪ್ರಕಾರ ಅಳಿವಿನಂಚಿನ ಪ್ರಭೇದವಾಗಿ ಗುರುತಿಸಲ್ಪಟ್ಟಿತ್ತು.
ಈ ಶಾರ್ಕ್ ತನ್ನ ಮಾಮೂಲಿ ವಲಸೆ ಮಾರ್ಗದಿಂದ ದಾರಿ ತಪ್ಪಿ ಒಂಟಿಯಾಗಿತ್ತು. ಇದರಿಂದ ಆಹಾರ ಸಿಗದೆ ಹಸಿವಿನಿಂದ ಅಗಾಧ ಪ್ರಮಾಣದ ಮರಳನ್ನು ಚಿಪ್ಪುಗಳನ್ನು ನುಂಗಿತ್ತು. ಹೀಗೆ ದುರ್ಬಲಗೊಂಡ ಶಾರ್ಕ್ ಅಲೆಗಳಿಗೆ ಸಿಲುಕಿ ದಡಕ್ಕೆ ತಳ್ಳಲ್ಪಟ್ಟಿತ್ತು. ಸಮುದ್ರದಲ್ಲಿದ್ದ ಬಂಡೆ, ಚೂಪಾದ ಕಲ್ಲುಗಳಿಗೆ ಬಡಿದು, ಗಾಯಗೊಂಡಿರುವ ಗುರುತುಗಳು ಮೀನಿನ ದೇಹದ ಮೇಲಿತ್ತು ಎಂದು ಕಾಲೇಜಿನ ಡೀನ್ ಮತ್ತು ಪ್ರಾಧ್ಯಾಪಕ ಎ.ಸೆಂಥಿಲ್ ವೇಲ್ ತಿಳಿಸಿದ್ದಾರೆ
ಮೀನಿನ ಶವ ಪರೀಕ್ಷೆ ಸಂದರ್ಭ ವೇಲ್ ಶಾರ್ಕ್ ನ ಕರುಳಲ್ಲಿ ಮರಳು ಮತ್ತು ಚಿಪ್ಪು ಪತ್ತೆಯಾಗಿ ಹೊಟ್ಟೆಯಲ್ಲಿ ಕಡಿಮೆ ಪ್ರಮಾಣದ ಆಹಾರ ಬಿಟ್ಟರೆ ಬಹುತೇಕ ಖಾಲಿಯಾಗಿತ್ತು. ಶಾರ್ಕ್ ನ ಅವಯವಗಳನ್ನು ಬೇರ್ಪಡಿಸಿ ಮುಂದಿನ ಪರೀಕ್ಷೆಗಾಗಿ ಸಂಗ್ರಹಿಸಿಡಲಾಗಿದೆ ಎಂದು ತಿಳಿಸಿದ್ದಾರೆ.