ಪುತ್ತೂರು, ಜು 04 (Daijiworld News/SM): ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸು-ಮೋಟೊ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ವೈರಲ್ ಗೆ ಕಾರಣರಾದ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ವಿಡಿಯೋ ವನ್ನು ಸಾರ್ವಜನಿಕವಾಗಿ ಪ್ರಸಾರ ಪಡಿಸಿದ ಆರೋಪದಲ್ಲಿ ಪುತ್ತೂರು ಕಸ್ಬಾ ಗ್ರಾಮದ ಮುರಳೀಧರ (29), ನೆಹರು ನಗರದ ಚಂದ್ರಶೇಖರ ಮಯ್ಯ(47), ಕಡಬ ಪೇಟೆ ಶ್ರೇಯಾನ್ಸ್ ಎಸ್.( 20), ಪೂವಪ್ಪ ಕೆ, ಪವನ್ ಕುಮಾರ್, ಮೋಹಿತ್ ಪಿ ಜಿ, ಧ್ಯಾನ್ ಎ ಎನ್, ಅದ್ವಿತ್ ಕುಮಾರ್ ನಾಯ್ಕ್ ಎನ್ ಬಂಧಿತ ಆರೋಪಿಗಳು.
ಪುತ್ತೂರಿನ ಖಾಸಗಿ ಕಾಲೇಜೊಂದರ ವಿಧ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ಮೊಬೈಲ್ ನ ಒಂದು ಅ್ಯಪ್ ನಲ್ಲಿ ಸ್ಟೇಟಸ್ ಹಾಕಿ ಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದಾನೆ.
ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ಗುಂಪು-ಗುಂಪುಗಳಾಗಿ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡಿದ್ದಾರೆ. ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಕೆಲವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾಸ್ ಎಂಬಾತನು ತನಗೆ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ್ದಾನೆ. ಇದೀಗ ಈ ವೀಡಿಯೋ ಹಂಚಿದ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತೊಂದು ವಿಡಿಯೋ ವೈರಲ್:
ಪುತ್ತೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ನಡೆಸಿದ್ದಾರೆ ಎನ್ನಲಾದ ಗ್ಯಾಂಗ್ರೇಪ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ವಿದ್ಯಾರ್ಥಿನಿ ಸ್ವತಃ ಅಸಭ್ಯ ರೀತಿಯಲ್ಲಿ ವಿಡಿಯೋ ಕಾಲ್ ಮಾಡಿರುವ ದೃಶ್ಯಾವಳಿಗಳನ್ನು ಹೊಂದಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕಾಲೇಜಿನ ಚುನಾವಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಡುವಿನ ವೈಷಮ್ಯದಿಂದಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿನಿಯ ಈ ವಿಡಿಯೋ ಹಲವು ಸಂಶಯಕ್ಕೆ ಕಾರಣವಾಗಿದೆ.
ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ಗಳಲ್ಲಿ ವೈರಲ್ ಮಾಡದಂತೆ ಹಾಗೂ ವೈರಲ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷೀಪ್ರಸಾದ್ ಎಚ್ಚರಿಸಿದ್ದಾರೆ.